HSRP ನಂಬರ್ ಪ್ಲೇಟ್ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಪೊಲೀಸ್ ಇಲಾಖೆ!!

HSRP: 2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡುವಂತೆ ಸಾರಿಗೆ ಇಲಾಖೆ ಕಡ್ಡಾಯಗೊಳಿಸುವಂತೆ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದೀಗ ಈ ಬಗ್ಗೆ ವಾಹನ ಸವಾರರು ಗಮನಿಸಬೇಕಾದ ಮಹತ್ವದ ಅಪ್ಡೇಟ್‌ವೊಂದನ್ನು ಪೊಲೀಸರು ನೀಡಿದ್ದಾರೆ.

 

ಈವರೆಗೂ ರಾಜ್ಯ ಸಾರಿಗೆ ಇಲಾಖೆಯಿಂದ 6 ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಇಷ್ಟು ಬಾರಿ ವಿಸ್ತರಣೆ ಆದರೂ ಕೂಡ ಇನ್ನೂ ಸಹ ಸಂಪೂರ್ಣವಾಗಿಲ್ಲ. ಯಾಕೆಂದರೆ ತುಂಬಾ ವಾಹನಗಳು ಇರುವುದರಿಂದ ಸಮಯ ಸಾಕಾಗುತ್ತಿಲ್ಲ ಎನ್ನುವ ಕೂಗುಗಳು ಕೇಳಿಬರುತ್ತಿವೆ. ಈ ನಡುವೆಯೇ ಸ್ಕ್ಯಾಮ್‌ವೊಂದು ಬಟಾಬಯಲಾಗಿದೆ.

 

ಆನ್‌ಲೈನ್‌ನಲ್ಲಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ವಿಚಾರವಾಗಿ ದೊಡ್ಡ ಮೋಸವೊಂದು ಹೊರಬುದ್ದಿದೆ. ಇದರಿಂದ ವಾಹನ ಸವಾರರು ಅಪ್ಪಿತಪ್ಪಿಯೂ ಯಾಮಾರಿದರೂ ಹಣ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಿನಲ್ಲಿ ಸ್ಕ್ನಾಮ್‌ ಶುರು ಆಗಿದೆ. ನಕಲಿ ಲಿಂಕ್ ಹರಿಬಿಟ್ಟು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ನೋಂದಣಿ ಬಳಿಕ ಕ್ಯೂ ಆರ್ ಕೋಡ್ ನೀಡುತ್ತಾರೆ. ಆದರೆ ಕ್ಯೂ ಆರ್ ಕೋಡ್ ಟಚ್ ಮಾಡಿದರೆ ಅಪರಿಚಿತರಿಗೆ ಲಿಂಕ್ ರವಾನೆ ಆಗುತ್ತದೆ. ಸ್ವಲ್ಪ ಯಾಮಾರಿದರೂ ನಿಮ್ಮ ಹಣ ಕಳ್ಳ ಪಾಲಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೆಂಗಳೂರು ಪೊಲೀಸರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

Comments are closed.