Vijayanagar: ‘ತುಂಬಿದ ಕೊಡ ತುಳಕಿತಲೇ ಪರಾಕ್’ ಎಂದು ಕಾರ್ಣಿಕ ನುಡಿದ ಮೈಲಾರಲಿಂಗೇಶ್ವರ – ಕಾರ್ಣಿಕದ ಅರ್ಥವೇನು?

Vijayanagar: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವಂತ ಶ್ರೀ ಮೈಲಾರ ಲಿಂಗೇಶ್ವರನ ಕಾರಣಿಕ ಕೇಳಲು ನಾಡಿನ ಜನ ಕಾತರರಾಗಿರುತ್ತಾರೆ. ಅಂತೆಯೇ ಇದೀಗ ಸನ್ನಿಧಿಯಲ್ಲಿ ವರ್ಷದ ಭವಿಷ್ಯ ವಾಣಿಯಾದಂತ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಗೊರವಯ್ಯ ‘ತುಂಬಿದ ಕೊಡ ತುಳುಕೀತಲೇ ಪರಾಕ್’ ಎಂಬುದಾಗಿ ಕಾರ್ಣಿಕ ನುಡಿ ನುಡಿದಿದ್ದಾರೆ.

ಹೌದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಜಾತ್ರೆಯನ್ನು ಇಂದು ನಡೆಸಲಾಯಿತು. ಈ ಬಾರಿ ರಾಮಣ್ಣ ಗೊರವಯ್ಯ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ. ತುಂಬೀದ ಕೊಡ ತುಳುಕೀತಲೇ ಪರಾಕ್ ಅಂತ ಕಾರ್ಣಿಕ ನುಡಿದಿದ್ದಾರೆ. ಯಸ್, ದೇಗುಲದ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್, ಅಶ್ವಾರೂಢರಾಗಿ ಡೆಂಕನಮರಡಿಗೆ ಬರುತ್ತಿದ್ದಂತೆಯೇ ‘ಏಳು ಕೋಟಿ ಏಳು ಕೋಟಿಗೋ … ಛಾಂಗ್‌ಬಲೋ…’ ಎಂಬ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಪ್ಪ ರಾಮಪ್ಪ, ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲ ಕ್ಷ ಣ ಆಕಾಶದತ್ತ ಶೂನ್ಯವನ್ನು ದಿಟ್ಟಿಸಿ ‘ಸದ್ದಲೇ…’ ಎಂದಾಗ ಇಡೀ ಭಕ್ತ ಸಮೂಹದಲ್ಲಿ ನಿಶಬ್ದ ವಾತಾವರಣ ಮೂಡಿತು. ಈ ಸಂದರ್ಭದಲ್ಲಿ ‘ತುಂಬಿದಕೊಡ ತುಳುಕೀತಲೇ ಪರಾಕ್’ ಎಂಬ ದೈವವಾಣಿ (ಕಾರ್ಣಿಕ) ನುಡಿದ ಗೊರವಪ್ಪನವರು ಕೆಳಕ್ಕೆ ಬಿದ್ದರು.

ಇನ್ಜು ದೈವವಾಣಿಯ ಬಗ್ಗೆ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದು, ಪ್ರಸಕ್ತ ವರ್ಷ ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿ ಎಂದು ವಿಶ್ನೇಷಿಸಿದ್ದಾರೆ.

Comments are closed.