Mangaluru: ಮಂಗಳೂರು: ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರ ಸ್ಪಾಟ್ ಡೆತ್!

Mangaluru: ಮಂಗಳೂರಿನ (Mangaluru) ಮುಡಿಪು ಸಮೀಪದ ಬೋಳಿಯಾರ್ ಎಂಬಲ್ಲಿ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ವರ್ಕಾಡಿ ಗ್ರಾಮದ ನಲೆಂಗಿ ನಿವಾಸಿ ಮೃತ ರೋಷನ್ ಮೋರಸ್ ಇವರು ವೃತ್ತಿಯಲ್ಲಿ ಎಲೆಕ್ಟ್ರಿಷನ್ ಆಗಿದ್ದು ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಆ ರಭಸಕ್ಕೆ ಇವರಿಗೆ ತಲೆಗೆ ಗಂಭೀರವಾಗಿ ಗಾಯವಾದ ಕಾರಣ ಸಾವನ್ನಪ್ಪಿದ್ದಾರೆ.
Comments are closed.