Hanumantu: ಮಾಜಿ ಸಚಿವರಿಂದ ಬಂತು ಕರೆ, ಬಿಗ್ ಬಾಸ್ ಹನುಮಂತು ರಾಜಕೀಯಕ್ಕೆ ಎಂಟ್ರಿ?

Hanumantu: ಬಿಗ್ ಬಾಸ್ ವಿನ್ನರ್ ಹನುಮಂತ ಅಂದರೆ ನಾಡಿನ ಜನತೆಗೆ ಅದೇನೋ ಒಂದು ತರ ಪ್ರೀತಿ. ಆತನ ಮುಗ್ದತೆ, ಆತನ ಸರಳತೆ, ನೇರ ನಡೆ-ನುಡಿಗೆ ನಾಡಿನ ಜನ ಮಾರುಹೋಗಿದ್ದಾರೆ. ಇದೀಗ ಹನುಮಂತು ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಸುದ್ದಿ ಒಂದು ಸದ್ದು ಮಾಡುತ್ತಿದೆ.

ಹೌದು, ಬಿಗ್ ಬಾಸ್ ವಿನ್ನರ್ ಹನುಮಂತು ರಾಜಕೀಯಕ್ಕೆ ಎಂಟ್ರಿ ಆಗುತ್ತಾರ ಎಂಬ ವಿಚಾರ ಇದೀಗ ಬಾರಿ ಸದ್ದು ಮಾಡುತ್ತಿದೆ. ಇದೆಲ್ಲದಕ್ಕೂ ಕಾರಣ ಮಾಜಿ ಸಚಿವರೊಬ್ಬರ ಕರೆ. ಯಸ್, ಇತ್ತೀಚಿಗೆ ಹನುಮಂತನಿಗೆ ಸಿನಿಮಾ ಆಫರ್‌ ಬಂದಿದೆ. ಈ ಬೆನ್ನಲ್ಲೇ ಸ್ವತ: ಹಾವೇರಿ ಜಿಲ್ಲೆಯ ರಾಜಕೀಯ ನಾಯಕರಾದ ಮತ್ತು ಮಾಜಿ ಸಚಿವರು ಹನುಮಂತನಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸ್ಥಳೀಯ ರಾಜಕಾರಣಕ್ಕೆ ಹನುಮಂತ ಅವರು ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಶುರುವಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ ಹಾಗೂ ಮಾಜಿ ಕೃಷಿ ಸಚಿವರು ಆದ ಬಿಸಿ ಪಾಟೀಲ್ ಅವರು ಹನುಮಂತನಿಗೆ ಕರೆ ಮಾಡಿ ಬಿಗ್‌ಬಾಸ್‌ ವಿನ್ನರ್ ಆಗಿದ್ದಕ್ಕೆ ಶುಭಕೋರಿದ್ದರು. ಅಲ್ಲದೆ ನೀವು ಹಾವೇರಿಯ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀರಾ, ನಾನು ನಿನ್ನ ಆಟ ನೋಡಿದ್ದೇ, ತುಂಬಾ ಚೆನ್ನಾಗಿ ಆಡಿದ್ದೀರಾ ಎಂದು ಸಹ ಹೇಳಿದ್ದಾರೆ.

ಈ ಆಡಿಯೋವನ್ನು ಸ್ವತ: ಬಿಸಿ ಪಾಟೀಲ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಹನುಮಂತ ರಾಜಕೀಯಕ್ಕೆ ಬರುತ್ತಾರಾ ಇಲ್ವಾ ಎನ್ನುವುದು ಮಾತ್ರ ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಗ್ರಾಮೀಣ ಭಾಗದಲ್ಲಿ ರಾಜಕೀಯ ನಾಯಕರು ಹನುಮಂತನನ್ನು ರಾಜಕೀಯಕ್ಕೆ ಕರೆತರೋದಕ್ಕಾಗಿ ಚಿಂತನೆಯನ್ನು ನಡೆಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ಸಹ ಹನುಮಂತನನ್ನು ಸೆಳೆಯಲು ಮುಂದಾಗಿವೆ ಎನ್ನಲಾಗಿದೆ.

Comments are closed.