Vijayapura: ಭೀಮಾತೀರದ ಹಂತಕ ‘ಬಾಗಪ್ಪ ಹರಿಜನ’ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್!

Vijayapura: ವಿಜಯಪುರದ (Vijayapura) ಮದೀನಾ ನಗರದಲ್ಲಿ ಭೀಮಾ ತೀರದ ಹಂತಕ ಬಾಗಪ್ಪ ಹರಿಜನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ವಿಜಯಪುರ ಜಿಲ್ಲೆ ಬೆಚ್ಚಿಬಿದ್ದಿತ್ತು. ಈ ಹಂತಕ ಭಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಿಂಟ್ಯಾ ಅಗರಖೇಡ್ (25) @ಪ್ರಕಾಶ್, ರಾಹುಲ್ ತಳಕೇರಿ (20), ಮಣಿಕಂಠ ದನಕೊಪ್ಪ(27) ಸುದೀಪ್ ಕಾಂಬಳೆ (23) ಎಂಬ ಆರೋಪಿಗಳನ್ನು ವಿಜಯಪುರದ ಗಾಂಧಿಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
Comments are closed.