Lucknow: ಮದುವೆ ಮನೆಗೆ ಎಂಟ್ರಿ ನೀಡಿದ ಚಿರತೆ!

Lucknow: ಉತ್ತರಪ್ರದೇಶದಲ್ಲಿ ಮದುವೆಯ ಸಂಭ್ರಮದ ವಾತಾವಾರಣ ಕಳೆಗಟ್ಟಿತ್ತು. ಆದರೆ ಯಾವುದೇ ಇನ್‌ವಿಟೇಶನ್‌ ನೀಡದೇ ಈ ಮದುವೆ ಚೌಟ್ರಿಗೆ ಅತಿಥಿಯಾಗಿ ಬಂದೇ ಬಿಟ್ಟಿದ್ದಾನೆ. ಹೌದು, ಮದುವೆ ಸಂಭ್ರಮದಲ್ಲಿ ಜನರಿರುವಾಗ ದಿಢೀರಾಗಿ ಚಿರತೆಯೊಂದು ಎಂಟ್ರಿ ನೀಡಿದೆ. ಕೂಡಲೇ ಜನರೆಲ್ಲ ಜೀವಭಯದಿಂದ ಹೊರಗೋಡಿ ಬಂದಿದ್ದಾರೆ. ಜನರು ಚಿರತೆ ದಾಳಿ ಮಾಡುವ ಭೀತಿಯಲ್ಲೇ ಅತ್ತ ಇತ್ತ ಓಡಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ಕೊನೆಗೆ ಅರಣ್ಯ ಇಲಾಖೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಚರಣೆ ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಿಕರು ಮದುಮಗಳನ್ನು ಸುರಕ್ಷಿತವಾಗಿ ಬೇರೆ ಕಡೆಗೆ ಕರೆದೊಯ್ಯದರು.

ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಚಿರತೆ ದಾಳಿ ಮಾಡಿತ್ತು.ದಾಳಿ ಮಾಡಿ ಗನ್‌ ಕಸಿದುಕೊಂಡಿತ್ತು ಚಿರತೆ. ಕೊನೆಗೂ ಹರಸಾಹಸ ಪಟ್ಟು ಚಿರತೆಯನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

Comments are closed.