Hubballi : 50 ವರ್ಷದ ಅಂಕಲ್ ಜೊತೆ 18ರ ಹುಡುಗಿ ಎಸ್ಕೇಪ್ !!

Hubballi: ಪ್ರೇಮಿಗಳ ದಿನ ಹತ್ತಿರವಾಗುತ್ತಿರುವಾಗಲೇ ಇಲ್ಲೊಬ್ಬ ಮುದಿ ಅಂಕಲ್ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ ಲವ್ವಿ ಡವ್ವಿ ಅಂತ ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೇ ಆ ಯುವತಿಯ ತಲೆಕೆಡೆಸಿ ಆಕೆಯೊಂದಿಗೆ ಅಂಕಲ್ ಊರು ಬಿಟ್ಟು ಪರಾರಿಯಾಗಿಯಾಗಿದ್ದಾನೆ.

 

ಹೌದು, ಹುಬ್ಬಳ್ಳಿಯಲ್ಲೊಂದು ವಿಚಿತ್ರ ಲವ್ ಸ್ಟೋರಿ ಬೆಳಕಿಗೆ ಬಂದಿದೆ. 18 ವರ್ಷ ಹುಡುಗಿ ಜೊತೆಗೆ 50 ವರ್ಷದ ಅಂಕಲ್ ಲವ್ವಿ ಡವ್ವಿ ಶುರು ಮಾಡಿದ್ದಾನೆ. ಎರಡು ಮಕ್ಕಳ ತಂದೆಯಾಗಿರುವ ಅಂಕಲ್‌ನ ಪ್ರೇಮ ಪಾಷದಲ್ಲಿ 18 ವರ್ಷದ ಯುವತಿ ಬಿದ್ದಿದ್ದಾಳೆ. ಅಜ್ಜಿ ಮನೆಗೆ ಹೋಗಿದ್ದ ಹುಡುಗಿ ನಾಪತ್ತೆಯಾಗಿದ್ದಾಳೆ. ಪೋಷಕರು ಕಣ್ಣಿರು ಹಾಕುತ್ತ ಬೀದಿ ಬೀದಿಗಳಲ್ಲಿ ಮಗಳ ಪೋಟೋ ಹಿಡಿದು ಹುಡುಕುತ್ತಿದ್ದಾರೆ.

ಅಂದಹಾಗೆ ಆ ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂಕಲ್ ಆಕೆಯ ತಲೆ ಕೆಡಿಸಿದ್ದಾನೆ. ಯುವತಿಯ ತಂದೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಾರೆ. ಅಂಕಲ್ ಪ್ರಕಾಶ್ ಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ಎರಡು ಮೂರು ವರ್ಷದ ಹಿಂದೆ ಯುವತಿಯ ಹಿಂದೆ ಬಿದ್ದಿದ್ದನು. ಇದೀಗ ಅಕೆಯೊಂದಿಗೆ ಪರಾರಿಯಾಗಿದ್ದಾನೆ. ಇಂದಿಗೆ 40 ದಿನವಾದ್ರೂ ಯುವತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Comments are closed.