ಫೆ.17 : ಪುತ್ತೂರಿನಲ್ಲಿ ಹಿಂ.ಜಾ.ವೇ.ವತಿಯಿಂದ ಯುವ ಸಮಾವೇಶ

Puttur : ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಇದರ ನೇತೃತ್ವದಲ್ಲಿ ಯುವ ಸಮಾವೇಶ ಪುತ್ತೂರು ಬನ್ನೂರಿನ ಹವ್ಯಕ ಭವನದಲ್ಲಿ ಫೆ.17ರಂದು ಸಂಜೆ 3 ಗಂಟೆಗೆ ನಡೆಯಲಿದೆ.
ಖ್ಯಾತ ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಅಧ್ಯಕ್ಷತೆ ವಹಿಸುವರು.ಹಿಂ.ಜಾ.ವೇ.ಕ್ಷೇತ್ರೀಯ ಸಂಘಟಕ ಜಗದೀಶ್ ಕಾರಂತ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಿಂ.ಜಾ.ವೇ.ಪುತ್ತೂರು ತಾಲೂಕು ಸಂಯೋಜಕ ಕೀರ್ತನ್ ಸವಣೂರು, ಸಹ ಸಂಯೋಜಕ ಶಿವಪ್ರಸಾದ್ ಶಾಂತಿಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.