ಫೆ.26 : ಕಾಸರಗೋಡು ಪನತ್ತಡಿ ಚಾಮುಂಡಿಕುನ್ನು ಶಿವಪುರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ,ಲಕ್ಷದೀಪ ಸಮರ್ಪಣೆ

Kasaragod : ಕಾಸರಗೋಡು ಪನತ್ತಡಿ ಚಾಮುಂಡಿಕುನ್ನು ಶಿವಪುರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ,ಲಕ್ಷದೀಪ ಸಮರ್ಪಣೆ ಕಾರ್ಯಕ್ರಮವು ಫೆ.26ರಂದು ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಫೆ.26ರಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ,6 ಗಂಟೆಗೆ :ಅಲಂಕಾರ ದರ್ಶನ,8 ಗಂಟೆಗೆ ಉಷಃ ಪೂಜೆ,ಗಣಪತಿ ಹೋಮ, ಅಖಂಡ ನಾಮ ಜಪ, 10ಗಂಟೆಗೆ ಶತರುದ್ರಾಭಿಷೇಕ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ತುಲಾಭಾರ ,ಅನ್ನದಾನ ನಡೆಯಲಿದೆ.

ಸಂಜೆ 4 ರಿಂದ ಪೂರ್ಣಕುಂಭದಿಂದೊಂದಿಗೆ ಪ್ರಭಾವಳಿ ಸಮರ್ಪಣಾ ಮೆರಮಣಿಗೆ (ಚಾಮುಂಡಿಕ್ಕನ್ನು ಶ್ರೀ ಚಾಮುಂಡಿ ದೈವಸ್ಥಾನದಿಂದ ಪ್ರಾರಂಭಿಸಲಾಗುವುದು) ನಡೆಯಲಿದೆ. ದೇವಾಲಯದ ಮಾತೃ ಸಮಿತಿಯಿಂದ ಪ್ರಭಾವಳಿ ಸಮರ್ಪಣೆ ನಡೆಯಲಿದೆ.

ಸಂಜೆ 5.30 ರಿಂದ ದಿವ್ಯಾಲಂಕೃತ ಪ್ರಭಾವಳಿ ಸಮರ್ಪಣೆ,ಸಂಜೆ 6 ಗಂಟೆಗೆ ದೀಪಾರಾಧನೆ, ಲಕ್ಷದೀಪ ಸಮರ್ಪಣೆ,ರಾತ್ರಿ 8.30 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.