Bihar: ಜಗಳವಾಡಿ ದೂರವಾದ ಗಂಡ-ಹೆಂಡತಿ, ಹೆಂಡತಿಗೆ ಉರಿಸಲು ಗಂಡ ಮಾಡಿದ್ದೇನು ಗೊತ್ತಾ?

Bihar: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಇದೆ. ಆದರೂ ಈ ಜಗಳ ಕೆಲವೊಮ್ಮೆ ಮಿತಿಮೀರಿ ವಿಚ್ಛೇದನದ ತನಕ ಬರುತ್ತದೆ. ಅಂತಯೇ ಇಲ್ಲೊಂದು ಗಂಡ-ಹೆಂಡತಿ ಜೋಡಿ ಜಗಳ ಮಾಡಿಕೊಂಡು ದೂರವಾಗಿದ್ದಾರೆ. ಆದರೆ ಗಂಡ ಮಾತ್ರ ಹೆಂಡತಿಗೆ ಉರಿಸಬೇಕೆಂದು ಸರಿಯಾಗಿ ಕ್ವಾಟ್ಲೆ ಕೊಡುತ್ತಿದ್ದಾನೆ.
ಹೌದು, ಬಿಹಾರದ ಪಾಟ್ನಾದಲ್ಲಿ ಗಂಡ- ಹೆಂಡತಿ ಕಿರಿಕ್ ಮಾಡಿಕೊಂಡು ದೂರಾಗಿದ್ದರು. ಹೆಂಡತಿ ಗಂಡನಿಗೆ ಡೈವೋರ್ಸ್ ನೋಟೀಸ್ ಕೂಡ ಕಳಿಸಿದ್ದರು. ಇದರಿಂದ ಪತಿರಾಯ ಆಕೆ ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದನು. ಮಾವ ತೆಗೆದುಕೊಟ್ಟ ಬೈಕ್ ನಲ್ಲಿ ಹೋಗಿ ಜಗಳವಾಡುತ್ತಿದ್ದನು ಎನ್ನಲಾಗಿದೆ.
ಅಲ್ಲದೆ ಇನ್ನೂ ಜಾಸ್ತಿ ಕಿರಿಕ್ ಮಾಡಬೇಕೆಂದು ಅದೇ ಬೈಕ್ ನಲ್ಲಿ ಹೋಗುವಾಗ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುತ್ತಿದ್ದ. ಬೈಕ್ ಮಾವನ ಮನೆ ಅಡ್ರೆಸ್ ನಲ್ಲಿ ರಿಜಿಸ್ಟರ್ ಆಗಿದ್ದ ಕಾರಣ ಫೈನ್ ನ ನೋಟಿಸ್ ಅಲ್ಲಿಗೆ ಹೋಗಿದೆ. ಮಗಳಿಗೆ ತೊಂದರೆ ಕೊಡುತ್ತಿದ್ದ ಈತ ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸಿ ಹೊಸ ತಲೆನೋವು ತಂದಿದ್ದಾನೆ. ದೂರವಾದ ಹೆಂಡತಿಗೆ ಸರಿಯಾಗಿ ಕ್ವಾಟ್ಲೆ ಕೊಡುತ್ತಿದ್ದಾನೆ.
Comments are closed.