Pune: ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿದ ವಿದ್ಯಾರ್ಥಿನಿಯರು; ಹಾಸ್ಟೆಲ್‌ನಿಂದ ವಜಾ

Pune: ಮಹಾರಾಷ್ಟ್ರದ ಪುಣೆಯಲ್ಲಿ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಾಲ್ವರು ವಿದ್ಯಾರ್ಥಿನಿಯರನ್ನು ಒಂದು ತಿಂಗಳ ಕಾಲ ಹಾಸ್ಟೆಲ್‌ವೊಂದರಿಂದ ಹೊರಹಾಕಿರುವ ಘಟನೆಯೊಂದು ನಡೆದಿದೆ. ಹಾಸ್ಟೆಲ್‌ ವಾರ್ಡನ್‌ ಮೀನಾಕ್ಷಿ ನರಹರೆ ವಿದ್ಯಾರ್ಥಿಗಳಿಗೆ ಅಧಿಕೃತ ಸೂಚನೆಯನ್ನು ನೀಡಿದ್ದಾರೆ. ಆದರೆ ಯಾರೂ ತಾವು ಮಾಡಿದ ಕೆಲಸವನ್ನು ಒಪ್ಪಿಕೊಳ್ಳದ ಕಾರಣ ನಾಲ್ವರಿಗೆ ಹಾಸ್ಟೆಲ್‌ ಪ್ರವೇಶವನ್ನು ಒಂದು ತಿಂಗಳ ಕಾಲ ನಿಲ್ಲಿಸಲಾಗಿದೆ.

ಫೆ.8 ರೊಳಗೆ ಪಿಜ್ಜಾ ಆರ್ಡರ್‌ ಮಾಡಿರುವುದನ್ನು ಒಪ್ಪಿಕೊಳ್ಳದಿದ್ದರೆ, ನಾಲ್ವರೂ ಒಂದು ತಿಂಗಳ ಹಾಸ್ಟೆಲ್‌ ಪ್ರವೇಶಿಸುವುದಕ್ಕೆ ಅವಕಾಶ ಇಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಸಾಮಾಜಿಕ ನ್ಯಾಯ ಇಲಾಖೆಯ ಸಮಾಜ ಕಲ್ಯಾಣ ಹಾಸ್ಟೆಲ್‌ 250 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುತ್ತಿತ್ತು.

ಆದರೆ ಈ ವಿವಾದಕ್ಕೆ ಕಾರಣ ಉಂಟು ಮಾಡಿದೆ. ಮಕ್ಕಳ ಶೈಕ್ಷಣಿಕ ಸಾಧನೆಯ ಬದಲಿಗೆ ಸಂಬಂಧವಿಲ್ಲದ ವಿಷಯಗಳ ಕುರಿತು ಶಿಕ್ಷೆಗೆ ಒಳಪಡಿಸುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪ ಮಾಡಿದ್ದಾರೆ. ಇದೀಗ ಅಧಿಕಾರಿಗಳು ಪೋಷಕರ ಮನವಿಯೂ ಶಿಸ್ತು ಕ್ರಮಕ್ಕೆ ಮುಂದಾಗಿರುವುದಾಗಿ ವರದಿಯಾಗಿದೆ.

Comments are closed.