BC Road: ಅಂದರ್ ಬಾಹರ್ ಜುಗಾರಿ ಅಡ್ಡೆ: 10 ಮಂದಿ ಬಂಧನ, ನಗದು ಸೊತ್ತುಗಳು ಪೊಲೀಸ್‌ ವಶ!

BC Road: ಬಿಸಿರೋಡ್ (BC Road) ಬಂಟ್ವಾಳ ತಾಲೂಕು ಕೊಡಣು ಗ್ರಾಮದ ಕೆನರಾ ಪಾಯಿಂಟ್ ಕೆಂಪು ಕಲ್ಲು ಕೋರೆಯ ಬಯಲು ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಜುಗಾರಿ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಮತ್ತು , ಸಾವಿರಾರು ರೂ.ನಗದು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಲ್ಯಾನ್ಸಿ ರೋಡ್ರಿಗಸ್‌, ಸಂಶುದ್ದೀನ್, ಜಾಫರ್ ಸಾಧಿಕ್, ಪ್ರವೀಣ್, ಅರವಿಂದ, ಉಮಾಶಂಕರ, ಪ್ರವೀಣ, ಶೋಧನ್, ವಿಜಯ ಕುಮಾ‌ರ್, ಮಹಮದ್ ಕಬೀರ ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿ ಇದ್ದ ನಗದು ರೂ.20500/-ಹಾಗೂ ರೂ.1180/- ಮೌಲ್ಯದ ಜುಗಾರಿ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Comments are closed.