ಡಿ.27-29 : ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ,ಸಾಮೂಹಿಕ ವಿವಾಹ ಪೂರ್ವ ತಯಾರಿಗೆ ಮಹಾಲಿಂಗೇಶ್ವರನ ನಡೆಯಲ್ಲಿ ಪ್ರಾರ್ಥನೆ

Putturu: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ನೇತೃತ್ವದಲ್ಲಿ 2025ರ ಡಿಸೆಂಬರ್ 27,28 ಮತ್ತು 29ರಂದು ಪುತ್ತೂರು ಶ್ರೀಮಹಾಲೀಂಗೇಶ್ವರ ದೇವಸ್ಥಾನದ ಎದುರು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಡಿ. 29ಕ್ಕೆ ಜರಗುವ 100 ಜೋಡಿಗೆ ಸಾಮೂಹಿಕ ವಿವಾಹದ ತಯಾರಿಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಫೆ.7ರಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು.ಕಾರ್ಯಕ್ರಮಕ್ಕೆ ಸಾಕಷ್ಟು ತಯಾರಿ ನಡೆಸಬೇಕಾಗಿರುವುದರಿಂದ ಈಗಿನಿಂದಲೇ ಕಾರ್ಯಪ್ರವೃತ್ತರಾಗುವ ಅನಿವಾರ್ಯತೆ ಇದೆ ಎಂದು ಅರುಣ್ ಪುತ್ತಿಲ ಪ್ರಾರ್ಥನೆಯ ಸಂದರ್ಭ ತಿಳಿಸಿದರು.
ಈ ಸಂದರ್ಭ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿನಯ ಸುವರ್ಣ, ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಹೇಂದ್ರ ವರ್ಮ ಬಜತ್ತೂರು, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ಪ್ರವೀಣ್ ಭಂಡಾರಿ, ರಾಜು ಶೆಟ್ಟಿ, ರವಿ ಕುಮಾರ್ ರೈ ಕೆದಂಬಾಡಿಮಠ, ಶ್ರೀಕಾಂತ್ ಆಚಾರ್ಯ, ರೂಪೇಶ್, ಜಯಪ್ರಕಾಶ್ ಅಮೈ, ಮನೀಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು
Comments are closed.