Kerala : ಕಲಿಯುಗದ ಸಾವಿತ್ರಿ; 40 ಅಡಿ ಬಾವಿಗೆ ಬಿದ್ದ ಪತಿಯನ್ನು ರಕ್ಷಿಸಿದ ಪತ್ನಿ

ಕೇರಳದ ಪಿರವಂನಲ್ಲಿ ಆಕಸ್ಮಿಕವಾಗಿ 40 ಅಡಿ ಆಳದ ಬಾವಿಗೆ ಪತಿಯನ್ನು ಪತ್ನಿಯೊಬ್ಬಾಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿದ್ದಾರೆ. 40 ಅಡಿ ಆಳದ ಬಾವಿಗೆ ಬಿದ್ದಿದ್ದ 64 ವರ್ಷದ ರಮೇಶನ್‌ ಅವರನ್ನು ಪತ್ನಿ ಕಂಡು ತಕ್ಷಣ ಬಾವಿಗಿಳಿದು ರಕ್ಷಿಸಿದ್ದಾರೆ 56 ವರ್ಷದ ಪದ್ಮಾ. ಅಗ್ನಿಶಾಮಕ ದಳ ಸಿಬ್ಬಂದಿ ಬರುವವರೆಗೂ ತನ್ನ ಹಾಗೂ ಪತಿಯ ಉಸಿರನ್ನು ಕಾಪಾಡಿದ್ದಾರೆ. ಪತಿಯನ್ನು ರಕ್ಷಿಸಲು ಮಹಿಳೆ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ರಕ್ಷಣಾ ತಂಡ ಬರುವವರೆಗೂ ಪತಿಯನ್ನು ಹಿಡಿದುಕೊಂಡು ನೀರಿನಲ್ಲಿದ್ದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮಹಿಳೆಯ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

 

ಪತಿ ಬಾವಿಗೆ ಬಿದ್ದಿರುವುದನ್ನು ಕಂಡ ಪದ್ಮಮ್ಮ (ರಮೇಶನ ಪತ್ನಿ) ತಕ್ಷಣ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದು, ಅಗ್ನಿಶಾಮಕ ತಂಡ ಬರುವವರೆಗೂ ಆಕೆ ತನ್ನ ಗಂಡನನ್ನು ಹಿಡಿದು ಎದೆಯ ಆಳದ ನೀರಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ಇದ್ದರು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ”ಹಗ್ಗವನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯ ಕೈಗಳಿಗೆ ತೀವ್ರ ಪೆಟ್ಟಾಗಿದೆ. ಪತಿಯನ್ನು ರಕ್ಷಿಸುವತ್ತ ಮಾತ್ರ ಆಕೆಯ ಗಮನವಿತ್ತು. ಆಕೆ ತನ್ನ ಗಂಡನನ್ನು ಹಿಡಿದುಕೊಂಡು ಎದೆಯ ಆಳದ ನೀರಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ರಕ್ಷಣಾ ತಂಡ ಬರುವವರೆಗೂ ನೀರಿನಲ್ಲಿ ತೇಲುತ್ತಿದ್ದರು” ಎಂದು ಹೇಳಿದ್ದಾರೆ.

 

ಮಹಿಳೆಯ ಧೈರ್ಯ ಮತ್ತು ಬುದ್ಧಿವಂತಿಕೆಯಿಂದಾಗಿ ತನ್ನ ಗಂಡನ ಜೀವವನ್ನು ಉಳಿಸಿದ್ದಾರೆ ಎಂಬ ಶ್ಲಾಘನೆ ವ್ಯಕ್ತವಾಗಿದೆ. ಘಟನೆಯಲ್ಲಿ ದಂಪತಿಗೆ ಯಾವುದೇ ಗಾಯಗಳಾಗಿಲ್ಲ. ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪತ್ನಿ ಕಲಿಯುಗದ ಸಾವಿತ್ರಿ ಎಂದು ಜನ ಕೊಂಡಾಡುತ್ತಿದ್ದಾರೆ.

Comments are closed.