Manjeshwara: ಮಂಜೇಶ್ವರ: ಬಸ್ ನಲ್ಲಿ ಕಳ್ಳತನ ಮಾಡಿದ ಮೂವರು ಮಹಿಳೆಯರ ಬಂಧನ

Manjeshwara: ಬಸ್ಸಿನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೋನ್ ಕಳವುಗೈದ ಆರೋಪದಲ್ಲಿ ಮೂವರು ಮಹಿಳೆಯರನ್ನು ಮಂಜೇಶ್ವರ (Manjeshwara) ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಕರ್ನಾಟಕ ಸಾರಿಗೆ ನಿಗಮದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಂಜತ್ತೂರಿನ ತಾರಾಮಣಿ ಎಂಬವರ ಮೊಬೈಲ್ ಫೋನ್, ಎಂಟು ಸಾವಿರ ರೂ.ನಗದು ಒಳಗೊಂಡ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು.

 

ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳ ಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಂತೆ ಪೊಲೀಸರು ಶಂಕಿತ ಮೂವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ವಶದಲ್ಲಿರುವ ಮಹಿಳೆಯರು ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ.

Comments are closed.