Mangalore: ಸೆಲೂನ್‌ನಲ್ಲಿ ದಾಂಧಲೆ ಪ್ರಕರಣ; ಪ್ರಸಾದ್‌ ಅತ್ತಾವರ ಸಹಿತ 11 ಮಂದಿಗೆ ಜಾಮೀನು

Mangalore: ಜ.23 ರಂದು ಬಿಜೈನಲ್ಲಿರುವ ಕಲರ್ಸ್‌ ಯುನಿಸೆಕ್ಸ್‌ ಸೆಲೂನ್‌ನಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್‌ ಅತ್ತಾವರ ಸಹಿತ 11 ಮಂದಿ ಆರೋಪಿಗಳಿಗೆ ಮಂಗಳೂರಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.

 

ಈ ಘಟನೆಯಲ್ಲಿ 14 ಮಂದಿಯ ಬಂಧನ ಪೊಲೀಸರು ಮಾಡಿದ್ದು, 11 ಮಂದಿಗೆ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ಮೂವರು ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ.

Comments are closed.