Hanumantu: ಬಿಗ್ ಬಾಸ್ ವಿನ್ನರ್ ಹನುಮಂತು SSLC ಯಲ್ಲಿ ಗಳಿಸಿದ ಅಂಕ ಎಷ್ಟು?

Hanumantu : ಬಿಗ್ ಬಾಸ್ ವಿನ್ನರ್ ಹನುಮಂತ ಕನ್ನಡಿಗರ ಮನೆಮಾತಾಗಿದ್ದಾರೆ. ಮನೆಮಾತು ಏನು, ಮನೆ ಮಗ ಆಗಿಬಿಟ್ಟಿದ್ದಾರೆ. ಅವರ ಸರಳತೆ, ನೇರ ನಡೆ-ನುಡಿಗೆ, ಮತ್ತೆ ಮನಸ್ಸಿಗೆ ನಾಡಿನ ಜನ ಫಿದಾ ಆಗಿದ್ದಾರೆ. ಇದರ ನಡುವೆ ಹನುಮಂತಗೆ ಸಿನಿಮಾ ಆಫರ್ ಗಳು ಬಂದರೂ ಕೂಡ ಅವರು ನೋ ಎಂದಿದ್ದಾರೆ. ಎಲ್ಲ ಬೆಳವಣಿಗೆಗಳ ನಡುವೆ ಹನುಮಂತು ಅವರ ವಿದ್ಯಾಭ್ಯಾಸ ಏನು ಎಂಬುದು ಚರ್ಚೆಯಾಗುತ್ತಿದೆ.

ಯಾರಾದರೂ ಏನಾದರೂ ಸಾಧನೆ ಮಾಡಿದಾಗ ಅವರ ಹಿನ್ನೆಲೆ ಮುನ್ನಡೆಗಳೆಲ್ಲವೂ ಕೂಡ ಚರ್ಚೆಯಾಗುತ್ತದೆ. ಅಂತ ಇದೀಗ ಹನುಮಂತ ವಿಚಾರ ಕೂಡ ಚರ್ಚೆಗೆ ಬಂದಿದೆ. ಹನುಮಂತ ಏನು ಓದಿದ್ದಾರೆ ಎಂದು ನೋಡುವುದಾದರೆ ಅವರು ಎಸ್ ಎಸ್ ಎಲ್ ಸಿ ಮಾಡಿದ್ದಾರೆ. ಹಾಗಿದ್ರೆ ಹನುಮಂತ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕ ಎಷ್ಟು? ಇಲ್ಲಿದೆ ನೋಡಿ.

ಹೌದು, ಹನುಮಂತ ಎಸ್‌ಎಸ್‌ಎಲ್‌ಸಿಯನ್ನು ಮುಗಿಸಿದ್ದಾರೆ. ಅವರು ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್‌ ಕಾರ್ಡ್‌ ಈಗ ಎಲ್ಲಾ ಕಡೆಗಳಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಸೀದಾ ಸಾದ ಹಳ್ಳಿಯ ಹುಡುಗ ಹನುಮಂತ ಕಲಿಕೆಯಲ್ಲಿಯೂ ಕೂಡ ಎತ್ತಿದ ಕೈ ಎನ್ನುವುದು ಅವರ ಮಾರ್ಕ್ಸ್‌ ಕಾರ್ಡ್‌ನಿಂದ ಗೊತ್ತಾಗಿದೆ.

ಸಂತೋಷದ ವಿಚಾರ ಅಂದ್ರೆ ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರಂತೆ. ಬಾಹ್ಯ ವಿದ್ಯಾರ್ಥಿಯಾಗಿ 2020-21ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿದ್ದಾರೆ ಹನುಮಂತ. ಈತನ ಓದು, ಕಲಿಕೆ ಹಾಗೂ ಗುಣದ ಬಗ್ಗೆ ಶಾಲಾ ಶಿಕ್ಷಕರು ಕೊಂಡಾಡಿದ್ದಾರೆ. ಹನುಮಂತನ ಬಗ್ಗೆ ಶಿಕ್ಷಕರಿಗೂ ಹೆಮ್ಮೆ ಇದೆ. ಇದೀಗ ಹನುಮಂತ ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್‌ ನೋಡಿ ಎಲ್ಲರೂ ಕೂಡ ಹುಬ್ಬೇರಿಸುತ್ತಿದ್ದಾರೆ.

Comments are closed.