Bengaluru : ರಾಹುಲ್ ದ್ರಾವಿಡ್ ಕಾರಿಗೆ ಡಿಕ್ಕಿ ಹೊಡೆದ ಗೂಡ್ಸ್ ಆಟೋ – ದ್ರಾವಿಡ್ ಮತ್ತು ಡ್ರೈವರ್ ನಡುವಿನ ವಾದ ವಿವಾದ ಹೇಗಿತ್ತು?

Bengaluru : ಬೆಂಗಳೂರಿನಲ್ಲಿ ಖ್ಯಾತ ಕ್ರಿಕೆಟ್ ರಾಹುಲ್ ದ್ರಾವಿಡ್ ಅವರ ಕಾರಿಗೆ ಗೂಡ್ಸ್ ಆಟೋ ಒಂದು ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಹೌದು, ನಗರದ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ರಾಹುಲ್‌ ದ್ರಾವಿಡ್‌ ಕಾರಿಗೆ ಗೂಡ್ಸ್‌ ಆಟೊ ಡಿಕ್ಕಿ ಹೊಡೆದಿದ್ದು, ರಾಹುಲ್‌ ದ್ರಾವಿಡ್‌ ಹಾಗೂ ಗೂಡ್ಸ್‌ ಆಟೊ ಡ್ರೈವರ್‌ನ ಹತ್ತು ಸೆಕೆಂಡುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಂದಹಾಗೆ ದ್ರಾವಿಡ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಿಗ್ನಲ್‌ನಿಂದ ಹೈಗ್ರೌಂಡ್‌ ಕಡೆ ಹೋಗುತ್ತಿದ್ದಾಗ ಜಾಮ್‌ ಇದ್ದ ಕಾರಣ ಕಾರಿಗೆ ಹಿಂಬದಿಯಿಂದ ಗೂಡ್ಸ್‌ ಆಟೊ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ದ್ರಾವಿಡ್‌ ಕಾರಿಗೆ ಏನಾದರೂ ಆಗಿದೆಯಾ ಎಂದು ಚೆಕ್‌ ಮಾಡುತ್ತಾ ಗೂಡ್ಸ್‌ ಡ್ರೈವರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಈ ವಿಡಿಯೊದಲ್ಲಿ ಆಟೊ ಚಾಲಕ ʼಸರ್‌ ಅದು ಫಾರ್ಚುನರ್‌ ಕಾರು ಸರ್‌ʼ ಎಂದು ಡಿಕ್ಕಿಗೆ ಕಾರಣ ಏನೆಂಬುದನ್ನು ತಿಳಿಸಿ ದ್ರಾವಿಡ್‌ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದು, ದ್ರಾವಿಡ್‌ ಬೇಸರದಿಂದಲೇ ʼನಂಗೂ ಗೊತ್ತು..ʼ ಎಂದು ಹೇಳಿದ್ದಾರೆ. ಇಷ್ಟು ಮಾತ್ರ ವಿಡಿಯೊದಲ್ಲಿದೆ.

Comments are closed.