Delhi: ಆ ಒಂದು ಹಾಡಿಗೆ ಹುಡುಗ ನೃತ್ಯ ಮಾಡಿದ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಹುಡುಗಿಯ ತಂದೆ !! ಸಾಂಗ್ ಯಾವುದೆಂದು ಕೇಳಿದ್ರೆ ಅಚ್ಚರಿಪಡ್ತೀರಾ!!

Delhi: ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಲ್ಲಿ ಅನೇಕ ಮದುವೆಗಳು ಮುರಿದು ಬೀಳುವಂತಹ ಅನೇಕ ಪ್ರಸಂಗಗಳನ್ನು ನಾವು ನೋಡಿದ್ದೇವೆ. ಇಂತಹ ಘಟನೆಗಳಿಗೆ ಕೆಲವು ವಿಚಿತ್ರ ಕಾರಣಗಳು ಕಂಡುಬಂದಿವೆ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಇದರ ಕಾರಣವಂತು ಭಾರಿ ವಿಚಿತ್ರ ಎನಿಸುತ್ತದೆ. ಯಾಕೆಂದರೆ ಮದುವೆ ಮಂಟಪದಲ್ಲಿ ಆ ಒಂದು ಐಟಂ ಸಾಂಗ್ ಗೆ ಹುಡುಗ ನೃತ್ಯ ಮಾಡಿದ ಎಂಬ ಕಾರಣಕ್ಕೆ ಹುಡುಗಿಯ ತಂದೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ.
ಹೌದು, ದೆಹಲಿಯ ವರನೊಬ್ಬ ತನ್ನ ಮದುವೆಯಲ್ಲಿ ಬಾಲಿವುಡ್ ಜನಪ್ರಿಯ ಐಟಂ ಸಾಂಗ್ಗೆ ಡ್ಯಾನ್ಸ್ ಮಾಡಿದ್ದು ಆತನ ಮದುವೆಯೇ ಕ್ಯಾನ್ಸಲ್ ಆಗಲು ಕಾರಣವಾಗಿದೆ. ಯಾವುದಪ್ಪಾ ಆ ಸಾಂಗ್ ಅಂತ ನೀವು ಅಚ್ಚರಿಪಡುತ್ತಿದ್ದರೆ. ಅದುವೇ ಮಾಧುರಿ ದೀಕ್ಷಿತ್ ಅಭಿನಯದ ಚೋಲಿ ಕೆ ಪೀಚೆ ಕ್ಯಾ ಹೈ..!! ಯಸ್, ಆ ಹಾಡಿಗೆ ವರ ಕಾಲು ಅಲ್ಲಾಡಿಸುವಂತೆ ಸ್ನೇಹಿತರ ಹಠ ಮಾಡಿದ್ದಾರೆ. ಅದರಂತೆಯೇ ವರ ಡ್ಯಾನ್ಸ್ ಮಾಡಿದ್ದಾನೆ. ಅದನ್ನು ಕಂಡ ವಧುವಿನ ತಂದೆ ಮದುವೆಯನ್ನ ಕ್ಯಾನ್ಸಲ್ ಮಾಡಿದ್ದಾರೆ.
ಅಂದಹಾಗೆ ವರನು ತನ್ನ ಮೆರವಣಿಗೆಯೊಂದಿಗೆ ಮದುವೆ ಮಂಟಪಕ್ಕೆ ಆಗಮಿಸಿದನು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವನ ಸ್ನೇಹಿತರು ಅವನನ್ನು ನೃತ್ಯ ಮಾಡಲು ಒತ್ತಾಯಿಸಿದರು. ಪ್ರಸಿದ್ಧ ಬಾಲಿವುಡ್ ಹಾಡು ಪ್ಲೇ ಆಗಲು ಪ್ರಾರಂಭಿಸಿದಾಗ, ಡ್ಯಾನ್ಸ್ ಮಾಡಲೇಬೇಕೆಂದು ವರನನ್ನು ಸ್ನೇಹಿತರು ಒತ್ತಾಯಿಸಿದ್ದಾರೆ. ಅಸಭ್ಯ ಡ್ಯಾನ್ಸ್ ನೋಡಿ ಕೋಪಗೊಂಡ ಅವರು ತಕ್ಷಣವೇ ಸಮಾರಂಭವನ್ನು ನಿಲ್ಲಿಸಿ ಮದುವೆಯನ್ನು ರದ್ದುಗೊಳಿಸಿದರು. ವರನ ನಡವಳಿಕೆ ತನ್ನ ಕುಟುಂಬದ ಮೌಲ್ಯಗಳನ್ನು ಅವಮಾನಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ವಧು ಕಣ್ಣೀರು ಹಾಕಿದ್ದಾರೆ. ಯಾರು ಎಷ್ಟೇ ಸಮರ್ಥನೆ ನೀಡಲು ಹೋದರೂ ವಧವಿನ ತಂದೆ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎನ್ನಲಾಗಿದೆ.
Comments are closed.