West Bengal: 10ಲಕ್ಷಕ್ಕೆ ಗಂಡನ ಕಿಡ್ನಿ ಮಾರಿಸಿ ಹಣದೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ಹೆಂಡ್ತಿ!!

West Bengal:ಪಶ್ಚಿಮ ಬಂಗಾಳದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಹತ್ತು ಲಕ್ಷಕ್ಕಾಗಿ ಗಂಡನ ಕಿಡ್ನಿಯನ್ನು ಒತ್ತಾಯದಿಂದ ಮಾರಿಸಿದ ಪತ್ನಿ, ಆ ಹಣ ತೆಗೆದುಕೊಂಡು ತನ್ನ ಬಾಯ್​ಫ್ರೆಂಡ್ ಜೊತೆ ಓಡಿ ಹೋದ ಘಟನೆ ನಡೆದಿದೆ.

 

ಹೌದು, 10 ಲಕ್ಷ ರೂ.ಗೆ ತನ್ನ ಗಂಡನ ಒಂದು ಕಿಡ್ನಿಯನ್ನು ಮಾರಾಟ ಮಾಡಿ, ಹಣ ಕೈಗೆ ಸಿಗುತ್ತಿದ್ದಂತೆ ತನ್ನ ಪ್ರಿಯಕರನೊಂದಿಗೆ ಮಹಿಳೆಯೊಬ್ಬಳು ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಪತ್ನಿಯ ಮೋಸದಾಟದಿಂದ ಮನನೊಂದ ಗಂಡ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

 

ಏನಿದು ಘಟನೆ?

ವರದಿಯ ಪ್ರಕಾರ ಹೆಂಡತಿ ತನ್ನ ಗಂಡನ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕು ಎಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಬಾಯ್​ ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಪತ್ನಿಯ ಕಾಟ ತಾಳಲಾರದೆ ಆತ ಸತತ ಮೂರು ತಿಂಗಳು ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿದ್ದಾನೆ. ನಂತರ ತನ್ನ ಕಿಡ್ನಿಯನ್ನು ಮಾರಿದ್ದಾನೆ.ಇದರಿಂದ ತನ್ನ ಮನೆಯ ಹಣಕಾಸಿನ ತೊಂದರೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ನಂಬಿದ್ದ. ಆದ್ರೆ ಅತ್ತ ಪೇಂಟ್​ ಮಾರುತ್ತಿದ್ದ ರವಿ ದಾಸ್ ಎಂಬುವವನ ಜೊತೆ ಅವನ ಪತ್ನಿ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಪತಿ ಕಿಡ್ನಿ ಮಾರಿ ಅದರಿಂದ ಬಂದ 10 ಲಕ್ಷ ರೂಪಾಯಿ ಹಣವನ್ನು ಪತ್ನಿಯ ಕೈಗೆ ಕೊಟ್ಟಿದ್ದೆ ತಡ ಆಕೆ ರವಿದಾಸ್ ಜೊತೆ ಹಣದೊಂದಿಗೆ ಪಲಾಯನ ಮಾಡಿದ್ದಾಳೆ.

 

ಕೆಲವು ದಿನಗಳ ನಂತರ ಶುಕ್ರವಾರ, ತನ್ನ ಪತ್ನಿ ರವಿದಾಸ್ ಎಂಬ ವ್ಯಕ್ತಿಯೊಂದಿಗೆ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ವಾಸಿಸುತ್ತಿರುವುದನ್ನು ತಿಳಿದ ಪತಿ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದಾನೆ. ಆದರೆ ನಿನಗೆ ವಿಚ್ಛೇದನ ಪತ್ರಗಳನ್ನು ಕಳುಹಿಸಿ ಕೊಡುವುದಾಗಿ ಗಂಡನಿಗೆ ಬೆದರಿಕೆ ಹಾಕಿ ಕಳುಹಿಸಿದ್ದಾಳೆ. ಇದೀಗ ಪತಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದೇನಾಗುತ್ತದೆ ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿಯಲಿದೆ.

Comments are closed.