Old man: ಕಳೆದು ಹೋದ ಹೆಂಡತಿಯನ್ನು ಹುಡುಕಿ ಕೊಟ್ಟರು-ವೃದ್ಧನ ಸಂಕಟ

Old man: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎನ್ನುವ ಗಂಡಸರ ಮಧ್ಯೆ ಇಲ್ಲೊಬ್ಬ ತಾತ ಹೆಂಡತಿಯೊಬ್ಬಳು ಹತ್ತಿರ ಇರುವುದೇ ಸಮಸ್ಯೆ ಎಂದು ಮಾತನಾಡಿದ್ದಾರೆ. ಈ ಮಾತನ್ನು ಅವರು ಹೇಳಿದ್ದು ಕುಂಭಮೇಳದಲ್ಲಿ ಅನ್ನೋದು ಇನ್ನೂ ವಿಶೇಷ. ” ಹಿಂದೆ ಕುಂಭಮೇಳದಲ್ಲಿ ಜನ ಕಳೆದುಹೋದರೆ ಹತ್ತೋ ಹದಿನೈದು ವರ್ಷದ ನಂತರ ಮರಳಿ ಬರುತ್ತಿದ್ದರು. ಅವರನ್ನು ಗುರುತು ಹಿಡಿಯಲು ಮೈಮೇಲಿದ್ದ ಹಚ್ಚೆಯನ್ನು ಕಂಡು ಹಿಡಿಯಲಾಗುತ್ತಿತ್ತು. ಆದರೆ ಇದೀಗ ಈ ವ್ಯವಸ್ಥೆ ಕೆಟ್ಟುಹೋಗಿದೆ. ಪುಣ್ಯ ಸ್ನಾನಕ್ಕೆ ಹೋದಾಗ ನನ್ನ ಪತ್ನಿ ಕಳೆದುಹೋಗಿದ್ದಳು. ಅಂತೂ ನಾನು ಇದರಿಂದ ತಪ್ಪಿಸಿಕೊಂಡೆ ಎನ್ನುವ ಖುಷಿಯಲ್ಲಿರುವಾಗಲೇ ಅರ್ಧಗಂಟೆಯಲ್ಲೇ ಪೊಲೀಸರು ಆಕೆಯನ್ನು ಹುಡುಕಿ ನನ್ನ ಪಕ್ಕ ಬಿಟ್ಟಿದ್ದಾರೆ. ಈ ರೀತಿ ಒಂದಲ್ಲ, ಎರಡಲ್ಲ, ಮೂರು ಸಲ ಆಕೆ ತಪ್ಪಿಸಿಕೊಂಡರೂ ಪೊಲೀಸರು ಅರ್ಧಗಂಟೆಯಲ್ಲೇ ಹುಡುಕಿ ನನ್ನ ಬಳಿ ತಂದು ಬಿಟ್ಟಿದ್ದಾರೆ. ಈ ವ್ಯವಸ್ಥೆ ಸರಿಯಿಲ್ಲ ” ಎಂದು ವೀಡಿಯೋ ಮಾಡಿ ವೃದ್ಧರೋರ್ವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಇದೀಗ ಸಖತ್‌ ವೈರಲ್‌ ಆಗಿದೆ. ತಾತಾ ಈ ಮಾತನ್ನು ಕ್ಯಾಮೆರಾ ಮುಂದೆ ಏನೋ ನಗುನಗುತ್ತಾ ಹೇಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆದರೆ ಈಗಿರುವ ಪ್ರಶ್ನೆ ಏನೆಂದರೆ, ಈ ತಾತಾ ತಮ್ಮ ಮನೆಗೆ ತಲುಪಿದ್ದಾರೋ? ಅಥವಾ ತಲುಪಿದರೂ ಕ್ಷೇಮವಾಗಿದ್ದಾರೋ ಎನ್ನುವ ಅನುಮಾನ ನೆಟ್ಟಿಗರಲ್ಲಿ ಮೂಡಿರುವುದಂತೂ ಖಂಡಿತ

Comments are closed.