Mangaluru: 28 ವರ್ಷಗಳ ನಂತರ ಕುಟುಂಬ ಸೇರಿದ ಚೈತಾಲಿ

Mangaluru: ಚೈತಾಲಿ (ಕಾಂಚನಮಾಲಾ ರಾಯ್) 28 ವರ್ಷಗಳ ನಂತರ ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ. ಅಮ್ಮನನ್ನು ಕಂಡು ಇಬ್ಬರು ಪುತ್ರರು ಸ್ನೇಹಾಲಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಹೌದು, 2023ರ ಸೆಪ್ಟೆಂಬರ್ 13ರಂದು ಸ್ನೇಹಾಲಯದ ತಂಡದವರು ಚೈತಾಲಿಯನ್ನು ರಕ್ಷಿಸಿ, ಅವರ ಕುಟುಂಬದವರನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿದ್ದರು.
ಕೊನೆಗೆ ಶ್ರದ್ಧಾ ಫೌಂಡೇಷನ್‌ಗೆ ಅವರನ್ನು ವರ್ಗಾಯಿಸಲಾಗಿತ್ತು. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕ ಪ್ರಯತ್ನಿಸಿದರೂ, ಯಾವುದೇ ಮಾಹಿತಿ ದೊರೆತಿರಲಿಲ್ಲ. ಹೀಗಿರುವಾಗ ಆಕಸ್ಮಿಕವಾಗಿ ಒಬ್ಬರು ಮಹಿಳೆ ಚೈತಾಲಿ ಕುಟುಂಬದ ಸದಸ್ಯರ ಹೆಸರು ಹೇಳಿದ್ದು, ಆ ಮೂಲಕ ಅವರ ಕುಟುಂಬದವರನ್ನು ಸ್ನೇಹಾಲಯ ಪತ್ತೆ ಮಾಡಿತು.
ಚೈತಾಲಿಯ ಒಬ್ಬ ಪುತ್ರ ಅಮೃತಸರದಲ್ಲಿ ಸೇನೆಯ ಅಧಿಕಾರಿ, ಮತ್ತೊಬ್ಬ ಪುತ್ರ ಸಿಲ್ಚಾರ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ತಾಯಿ ಮರಳಿ ಸಿಗಲಾರದೆಂದು ಭಾವಿಸಿದ್ದ ಅವರು, 28 ವರ್ಷಗಳ ಬಳಿಕ ತಾಯಿಯನ್ನು ನೋಡಿ, ಆನಂದಭಾಷ್ಪ ಸುರಿಸಿದರು ಎಂದು ಸ್ನೇಹಾಲಯದ ಪ್ರಕಟಣೆ ತಿಳಿಸಿದೆ.
Comments are closed.