Assam: ವೃದ್ಧಾಶ್ರಮದಲ್ಲಿ ಚಿಗುರಿತು ಪ್ರೀತಿ – ಅದ್ದೂರಿಯಾಗಿ ನಡೆಯಿತು ಅಜ್ಜ ಅಜ್ಜಿಯ ಮದುವೆ!! 4,000 ಅತಿಥಿಗಳು ಭಾಗಿ

Assam: ಪ್ರೀತಿಗೆ ಕಣ್ಣಿಲ್ಲ ಎಂಬುದು ಫೇಮಸ್ ಆದ ವಾಕ್ಯ. ಆದರೆ ಈಗ ಕಣ್ಣಿಲ್ಲ ಎಂಬುದು ಮಾತ್ರವಲ್ಲ ವಯಸ್ಸು ಕೂಡ ಮುಖ್ಯವಲ್ಲ ಎಂಬುದನ್ನು ಗುವಹಾಟಿ ವೃದ್ಧಾಶ್ರಮದ ಅಜ್ಜ -ಅಜ್ಜಿ ಇಬ್ಬರು ತೋರಿಸಿಕೊಟ್ಟಿದ್ದಾರೆ.
ಹೌದು, ಇದಕ್ಕೆ ಅಸ್ಸಾಂನ ಗುವಾಹಟಿ (Guwahati)ಯ ವೃದ್ಧಾಶ್ರಮದಲ್ಲೊಂದು ಬಲು ಅಪರೂಪದ ಘಟನೆ ನಡೆದಿದೆ. ವಯಸ್ಸಾದ ಅಜ್ಜ ಅಜ್ಜಿ ಇಬ್ಬರು ಸುಮಾರು ಒಂದು ವರ್ಷಗಳ ಕಾಲ ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಯಸ್, ವೃದ್ಧಾಶ್ರಮದಲ್ಲಿ ವಯಸ್ಸು 65ರ ಗಡಿ ದಾಟಿದ ಮೇಲೆ ಇಬ್ಬರಿಗೂ ಪ್ರೀತಿ ಶುರುವಾಗಿದ್ದು ಪರಸ್ಪರ ಪ್ರೀತಿಗೆ ಬಿದ್ದ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮವರಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದವರಿಗೆ ಈಗ ವೃದ್ಧಾಶ್ರಮದಲ್ಲಿಯೇ ದಾಂಪತ್ಯದ ಸವಿ ಸವಿಯುವ ಅವಕಾಶ ಸಿಕ್ಕಿದಂತಾಗಿದೆ.
ಅಂದಹಾಗೆ ಮದುವೆಯಾದ ಪದ್ಮೇಶ್ವರ ಗೋವಾಲ ಅವರಿಗೆ 71 ವರ್ಷ. ಅವರ ಪತ್ನಿ ಜಯಪ್ರಭಾ ಅವರಿಗೆ 65 ವರ್ಷ. ಪದ್ಮೇಶ್ವರ್ ಮನೆಯೊಂದರಲ್ಲಿ ಕೆಲಸಗಾರನಾಗಿದ್ದರು. ಮನೆ ಮಾಲೀಕನ ನಿಧನದ ನಂತ್ರ ಮನೆ ಸೊಸೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಳು. ಜಯಪ್ರಭಾ, ಸಹೋದರನ ನಿಧನದ ನಂತ್ರ ಇಲ್ಲಿಗೆ ಬಂದಿದ್ದರು. ಅವರ ಸೋದರಳಿಯ, ಜಯಪ್ರಭಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇಲ್ಲಿಗೆ ಬಂದ ಬಳಿಕ ಕಳೆದ ಒಂದು ವರ್ಷದಿಂದ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು.
ಪ್ರೀತಿ ಚಿಗುರಿದ್ದು ಹೇಗೆ? :
ಜಯಪ್ರಭಾ, ವೃದ್ಧಾಶ್ರಮಕ್ಕೆ ಬಂದಾಗ ಹಾಡೊಂದನ್ನು ಹೇಳಿ ಎಲ್ಲರನ್ನೂ ರಂಜಿಸಿದ್ದರು. ಈ ಸುಂದರ ಧ್ವನಿಗೆ ಜಯಪ್ರಭಾ ಕರಗಿ ಹೋಗಿದ್ದಾರೆ. ಇದೇ ಹಾಡಿನ ಮೂಲಕ ಇಬ್ಬರು ಹತ್ತಿರವಾಗಿದ್ದಾರೆ. ಮೊದಲ ದಿನದಿಂದಲೇ ಇಬ್ಬರ ಮಧ್ಯೆ ವಿಶೇಷ ಬಾಂಡಿಂಗ್ ಬೆಳೆದಿದೆ. ಒಟ್ಟಿಗಿದ್ದಾಗ ಸಂತೋಷವಾಗಿರ್ತಿದ್ದ ಅವರನ್ನು ಆಶ್ರಮದ ಉತ್ಪಲ್ ಹರ್ವವರ್ಧನ್ ಗಮನಿಸಿದ್ದಾರೆ. ಇವರಿಬ್ಬರು ಪ್ರೀತಿ ಮಾಡ್ತಿದ್ದಾರೆ ಎಂಬುದನ್ನು ತಿಳಿದು, ಮದುವೆ ಪ್ರಸ್ತಾಪವನ್ನು ಇಟ್ಟಿದ್ದಾರೆ. ಮನೆಯವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ
ಅದ್ಧೂರಿಯಾಗಿ ನಡೆಯಿತು ಮದುವೆ:
ಒಂದು ತಿಂಗಳ ಹಿಂದೆ ಮದುವೆ ಆಚರಣೆ ಶುರುವಾಗಿದೆ. ಪತಿ – ಪತ್ನಿಯಾಗುವವರು ಒಂದೇ ಕಡೆ ಇರಬಾರದು ಎನ್ನುವ ಕಾರಣಕ್ಕೆ ಜಯಪ್ರಭಾ ಅವರನ್ನು ಮಾತೃ ನಿವಾಸ ಎಂಬ ಮತ್ತೊಂದು ವೃದ್ಧಾಶ್ರಮಕ್ಕೆ ಕಳುಹಿಸಲಾಗಿತ್ತು. ಮಾತೃ ನಿವಾಸದಲ್ಲಿ ಮದುವೆ ನಡೆದಿದೆ. ವರ ಪದ್ಮೇಶ್ವರ್, ದಿಬ್ಬಣದ ಜೊತೆ ಮಾತೃ ನಿವಾಸಕ್ಕೆ ಹೋಗಿ ಜಯಪ್ರಭಾ ಮದುವೆಯಾಗಿದ್ದಾರೆ. ನಂತ್ರ ಇಬ್ಬರೂ ತಮ್ಮ ಆಶ್ರಮಕ್ಕೆ ಮರಳಿದ್ದಾರೆ. ಆಶ್ರಮದಲ್ಲಿ ನಡೆದ ಮದುವೆ ಸಮಾರಂಭ ಆಶ್ರಮ ವಾಸಿಗಳಿಗೆ ಖುಷಿ ನೀಡಿದೆ. ಪ್ರತಿಯೊಬ್ಬರೂ ಮದುವೆಯನ್ನು ಎಂಜಾಯ್ ಮಾಡಿದ್ದಾರೆ. ಅರಿಶಿನ, ಮೆಹಂದಿ ಸೇರಿದಂತೆ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಮದುವೆಗೆ 4000 ಅತಿಥಿಗಳು ಹಾಜರಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
Comments are closed.