Mokshita Pai: ಮಕ್ಕಳ ಕಿಡ್ನಾಪ್ ಪ್ರಕರಣ – ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಮೋಕ್ಷಿತಾ ಹೇಳಿದ್ದೇನು?

Mokshita Pai: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿದೆ. ಹನುಮಂತು ಅವರು ವಿನ್ನರ್ ಆಗಿ ಹೊರ ಬಂದಿದ್ದಾರೆ. ಇನ್ನು ಮೋಕ್ಷಿತಾ ಪೈ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ. ಅಂದ ಹಾಗೆ ಮೋಕ್ಷಿತ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಂತಹ ಸಂದರ್ಭದಲ್ಲಿ ಇತ್ತ ಹೊರಗೆ ಅವರು ಮಕ್ಕಳು ಕಿಡ್ನಾಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ರು ಎಂಬ ಆರೋಪ ಬೆಳಕಿಗೆ ಬಂದಿತ್ತು. ಇದೀಗ ಈ ಕುರಿತು ಬಿಗ್ ಬಾಸ್ ನಿಂದ ಹೊರಬಂದ ಮೋಕ್ಷಿತ ಈ ಕುರಿತು ತಿರುಗೇಟು ನೀಡಿದ್ದಾರೆ
ಹೌದು, ಮೋಕ್ಷಿತಾ ಪೈ(Mokshita Pai)ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಅವರ ಮೇಲೆ ಇದ್ದ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆ ಕೇಸ್‌ಗೂ ನನಗೂ ಸಂಬಂಧವಿಲ್ಲ. ಆ ಪ್ರಕರಣ ಈಗ ಮುಗಿದು ಹೋದ ಅಧ್ಯಾಯ. ಎಲ್ಲರ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿರುತ್ತದೆ. ಎಲ್ಲರ ಜೀವನದಲ್ಲೂ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿರುತ್ತಾರೆ. ನನ್ನ ಜೀವನದಲ್ಲೂ ಅಂತಹ ಘಟನೆ ನಡೆದಿದೆ. ಮತ್ತೊಬ್ಬರ ಹೆಸರು ಹಾಳು ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ ಎಂದಿದ್ದಾರೆ.
ಇನ್ನು ಮೋಕ್ಷಿತಾ ಪೈ ಬಿಗ್‌ಬಾಸ್ ಮನೆಯಲ್ಲಿ ವಿನ್ನರ್ ರೇಸ್‌ನಲ್ಲಿ ಟ್ರೋಫಿಗೆ ಹತ್ತಿರವಾಗಿ ಹೊರಬಂದಿದ್ದಾರೆ. ಟಾಪ್ 4 ಸ್ಪರ್ಧಿ ಮೋಕ್ಷಿತಾಗೆ ವ್ಯಾಪಕ ಜನಪ್ರಿಯತೆ ಸಿಕ್ಕಿದೆ. ಅವರ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಅವರಿಗೆ ಶುಭ ಕೋರಿದ್ದಾರೆ.
Comments are closed.