Death News: ಕೀ ಪ್ಯಾಡ್‌ ಮೊಬೈಲ್‌ ನುಂಗಿ ಸಾವಿಗೀಡಾದ ಮಹಿಳೆ

Death News: ಮಹಿಳೆಯೊಬ್ಬರು ಮೊಬೈಲ್‌ ಫೋನ್‌ ನುಂಗಿ ಚಿಕಿತ್ಸೆಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡಲ್ಲಿ ನಡೆದಿದೆ. ಸಾವಿಗೀಡಾಗಿರುವ ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದು, 35 ವರ್ಷದವರಾಗಿದ್ದಾರೆ.

ಕುಟುಂಬದವರು ಹೇಳಿರುವ ಪ್ರಕಾರ, ರಮ್ಯ ಸ್ಮೃತಿ ಕಳೆದ 15 ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮನೆಮಂದಿ ಚೆನ್ನಾಗಿಯೇ ಆಕೆಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಆಕೆ ಮೊನ್ನೆ ಮೊಬೈಲ್‌ ಫೋನನ್ನು ನುಂಗಿದ್ದು, ಮನೆಯ ಮಂದಿ ಮೊಬೈಲ್‌ಗಾಗಿ ಹುಡುಕಾಟ ನಡೆಸಿದಾಗ ಆಕೆ ನುಂಗಿರುವ ಕುರಿತು ಹೇಳಿದ್ದಾರೆ. ಕೂಡಲೇ ಮನೆಮಂದಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆದರೆ ಮೊಬೈಲ್‌ ನುಂಗಿದ ಪರಿಣಾಮ ಆಕೆಯ ಅನ್ನನಾಳಕ್ಕೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ಹೇಳಿದ್ದು, ಆಕೆಯನ್ನು ಇನ್ನೊಂದು ಆಸ್ಪತ್ರೆಗೆ ಜ.25 ರ ರಾತ್ರಿ ಕಾಕಿನಾಡದ ಜಿಜಿಎಚ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಲ್ಲಿ ಕೂಡಾ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿದ್ದಾಳೆ.

ಮಗಳು ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾಳೆ ಎಂದು ಮೃತಳ ತಂದೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Comments are closed.