Hanumantu: ಬಿಗ್ ಬಾಸ್-11 ವಿನ್ನರ್ ಗೆ ಇಲ್ಲ ಗೆಲುವಿನ ಸಂಭ್ರಮ – ಮನೆಗೆ ಬರುತ್ತಿದ್ದಂತೆ ಪ್ರೀತಿಪಾತ್ರರನ್ನು ಕಳೆದುಕೊಂಡ ಹನುಮಂತ!!

Hanumantu: ಎಲ್ಲರೂ ಊಹೆ ಮಾಡಿನಂತೆ ಬಿಗ್ ಬಾಸ್ ಕನ್ನಡ ಸೀಸನ್ 11ನ ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಆದರೆ 50 ಲಕ್ಷ ಬಾಚಿಕೊಂಡು ಹನುಮಂತ ಮನೆಗೆ ತೆರಳುವ ವೇಳೆ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ. ಹನುಮಂತ ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ.

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಗಾಯಕ ಹನುಮಂತ ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ವೇಳೆ ಹಳ್ಳಿ ಹೈದ ಹನುಮಂತ ಅವರು ಬಿಗ್ ಬಾಸ್ ಸೀಸನ್ 11ರ ಟ್ರೋಫಿಯನ್ನು ಗೆದ್ದಿದ್ದು ತಮ್ಮ ಗ್ರಾಮಕ್ಕೆ ಬರುವಾಗ ಅವರನ್ನು ದೊಡ್ಡದಾಗಿ ಮೆರವಣಿಗೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹನುಮಂತ ಅವರು ಬಿಗ್ ಬಾಸ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ಮಾಡದಂತಹ ಸ್ಥಿತಿ ಮನೆಯಲ್ಲಿ ನಿರ್ಮಾಣವಾಗಿದೆ. ಹನುಮಂತನ ಸ್ವಂತ ಚಿಕ್ಕಪ್ಪ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಸಂಭ್ರಮದ ಮನೆಯಲ್ಲಿ ಸೂತಕ ಆವರಸಿದ್ದು, ಹನುಮಂತನ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಹನುಮಂತ ಅವರ ಚಿಕ್ಕಪ್ಪ ದೇವಪ್ಪ ನಿಧನರಾದ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಯಾವುದೇ ಅದ್ದೂರಿ ಸಂಭ್ರಮಾಚರಣೆ ಮಾಡದಿರಲು ಮನೆಯವರು ನಿರ್ಧಾರ ಮಾಡಿದ್ದಾರೆ.

Comments are closed.