ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಬಹಳ ಮುಖ್ಯ – ಕರ್ನಾಟಕದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್ ವಿಶ್ವನಾಥ್

H.Vishwanath: ನಮ್ಮನ್ನು ಆಳುವವರು ಯಾರು? ಸರಕಾರ, ರಾಜ ಮಹರಾಜರುಗಳು ಯಾರೂ ಅಲ್ಲ. ಅಧಿಕಾರ ಅಂತಸ್ತುಗಳೂ ಅಲ್ಲ. ನನ್ನನ್ನು ಆಳುವುದು ನನ್ನ ಮನಸ್ಸು. ಅಂತಹ ಮನಸನ್ನು ಮುದವಾಗಿಡುವುದೇ ಸಾಹಿತ್ಯ, ಸಂಸ್ಕೃತಿ, ಕಲೆ, ನೃತ್ಯ. ಇದೆಲ್ಲದಕ್ಕೂ ಹೆಸರಿರುವ ನಾಡು ಮೈಸೂರು. ಅದೆಲ್ಲವನ್ನು ಕೂಡಾ ಜನರಿಗೆ ಪರಿಚಯಿಸಿ ಜನರು ಭಾಗವಹಿಸುವಂತೆ ಒಂದು ದೊಡ್ಡ ಅವಕಾಶ ಕಲ್ಪಿಸಿಕೊಟ್ಟವರು ಮೈಸೂರು ಯದುವಂಶದ ಅರಸರು.
ಒಂದು ಗಂಟೆ ಎರಡು ಗಂಟೆೆ ಕೂತು ನಾಟಕ ನೋಡುವುದು ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಮನುಷ್ಯನಿಗೆ ಬಹಳ ಮುಖ್ಯ. ಇಂತಹ ಕಾರ್ಯಕ್ರಮಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ಸರಕಾರದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಹಾಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.
ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ದಿನಾಂಕ 25-01-2025ನೇ ಶನಿವಾರ ಕೆ.ಎಸ್.ನರಸಿಂಹ ಸ್ವಾಮಿ ಜನ್ಮದಿನ ಪ್ರಯುಕ್ತ ಮೈಸೂರು ಪುರಭವನದಲ್ಲಿ ಆಯೋಜಿಸಿದ “ಮಲ್ಲಿಗೆ ಕಂಪು” ವಿಚಾರ ಗೋಷ್ಠಿ- ಕವಿಗೋಷ್ಠಿ – ಕೃತಿ ಬಿಡುಗಡೆ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೈಸೂರಿನ ಪ್ರೇಮ ಕವಿಯ ಮಲ್ಲಿಗೆ ಕಂಪು ಕಾರ್ಯಕ್ರಮ ಆಯೋಜಿಸಲು ಮಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಗಂಗಾಧರ ಗಾಂಧಿ ತಂಡವನ್ನು ನಾನು ಅಭಿನಂದಿಸುವೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಮೈಸೂರು ಮಲ್ಲಿಗೆ ಕಂಪು ಸದಾ ಹಸಿರಾಗಿರಬೇಕು. ಆ ಮೂಲಕ ಮೈಸೂರು ಮಲ್ಲಿಗೆಯ ಕಂಪು ಜಗದಗಲ ಹಬ್ಬ ಬೇಕೆಂದು ಹೇಳಿದರು. ಇದಕ್ಕೂ ಮುನ್ನ ಕೆ.ವಿ. ಲಕ್ಷ್ಮಣ ಮೂರ್ತಿ ಸಾರಥ್ಯದಲ್ಲಿ ಮೂಡಿಬಂದ ಭೂತಾಯಿ, ಕವನ ಕೃಷಿಕ, ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ, ಮಾತೃ ಮಡಿಲು ಎಂಬ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆ.ಎಸ.ನರಸಿಂಹ ಸ್ವಾಮಿಯವರ ಸಾಹಿತ್ಯವನ್ನು ಓದಿ ಗೀತೆಗಳನ್ನು ಆಲಿಸಿ ಬೆಳೆದವರು ನಾವು.ಮತ್ತು ಅವರು ನಮ್ಮ ಮೆಚ್ಚಿನ ಕವಿ ಈ ಕಾರಣದಿಂದಾಗಿ ಅವರ ಜನ್ಮ ದಿನಾಚರಣೆಯನ್ನು ಅನೇಕ ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ.
ಈ ಕಾರ್ಯಕ್ರಮವನ್ನು ಈ ಬಾರಿ ಅವರ ಜನ್ಮ ಜಿಲ್ಲೆ ಮೈಸೂರಿನಲ್ಲಿ ನಡೆಸಬೇಕು ಎಂಬ ಆಲೋಚನೆಯಿಂದ ಅವರು ಪ್ರಥಮ ಬಾರಿ ಉದ್ಯೋಗವನ್ನು ಆರಂಭಿಸಿದ ಮೈಸೂರಿನ ಪುರಭವನದಲ್ಲಿ ಆಯೋಜಿಸಿದ್ದೇವೆ.. ಇದು ನಮಗೂ ಸಂತಸ ತಂದಿದೆ ಮತ್ತು ಅವರ ಪುತ್ರ ಕೆ. ಎನ್. ಮಹಾಬಲ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತಂದಿದೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆಗೈದ ಡಾ. ಅಯುಬ್ ಅಹಮದ್‌ಜಿ, ಯಶೋಧಾ ಆರ್., ರಾಣಿಪ್ರಭ ಹೆಚ್. ಪಿ. ಮಾಧ್ಯಮ ಕ್ಷೇತ್ರದಲ್ಲಿ ಜಯಂತ್ ಜಿ, ಮತ್ತು ಸಂಘಟನಾ ಕ್ಷೇತ್ರದಲ್ಲಿ ಡಾ. ಪಳನಿಸ್ವಾಮಿ ಮೂಡುಗೂರು ಇವರಿಗೆ NSCDF ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೈಸೂರು ಮಹರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮನಾಪುರ, ಲೇಖಕ ಮತ್ತು ವಿಶ್ರಾಂತ IFS ಅಧಿಕಾರಿ ಕೆ.ವಿ.ಲಕ್ಷ್ಮಣ ಮೂರ್ತಿ, ಲೇಖಕ ಮತ್ತು ಕೆ.ಎಸ್.ನರಸಿಂಹಸ್ವಾಮಿ ಪುತ್ರ, ಕೆ. ಎನ್. ಮಹಾಬಲ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಭಾಗವಹಿಸಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ಪ ಹೊನ್ನಳ್ಳಿ ಮಾತನಾಡಿ ಕನ್ನಡ ಕಾವ್ಯ, ನವೋದಯ, ನವ್ಯ, ನವ್ಯೋತ್ತರ, ದಲಿತ, ಬಂಡಾಯ ಮುಂತಾದ ಹಲವು ರೂಪ ಪಡೆದು ಬದಲಾಗುತ್ತ ಬಂದರು ನವೋದಯದಲ್ಲಿ ಹೊರಹೊಮ್ಮಿದ ಕೆ.ಎಸ್. ನರಸಿಂಹ ಸ್ವಾಮಿಯವರು ಸರ್ವ ಕಾಲಕ್ಕೂ ಸಲ್ಲುವ ಕವಿ. ಅವರ ಮೈಸುರು ಮಲ್ಲಿಗೆ ಅಮರ ಕಾವ್ಯದಂತೆ ಎಂದು ಅವರು ಅಭಿಪ್ರಾಯ ಪಟ್ಟರು.
ಕವಿಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್ ಕೊಳ್ಳೆಗಾಲ, ಪದ್ಮಾ ಆನಂದ್, dr. ಮಧುಸೂದನ್ ಎನ್., ಮು.ನಾ. ರಮೇಶ್, ಕೆ.ಟಿ.ಶ್ರೀಮತಿ, ಅನಂತ ಎಮ್. ತಾಮ್ಹನ್ಕರ್, ಗಿರೀಶ್ ವಿ., ಬಿ.ಕೆ ಮೀನಾಕ್ಷಿ, ಗು.ಚಿ. ರಮೇಶ್, ಮಂಜುಳಾ ನಾಗರಾಜು, ಕೆರೊಡಿ ಎಂ ಲೋಲಾಕ್ಷಮ್ಮ ., ಕೆ.ಎಂ. ಪ್ರಭು ಕಲ್ಲಹಳ್ಳಿ, ಕೃ. ಪಾ. ಮಂಜುನಾಥ್, ವಿ. ಮಂಜುಳಾ ಉಪದ್ಯಾಯಿನಿ, ಆಸರೆ ರಾಜೇಂದ್ರ ಪ್ರಸಾದ್ ಚಾಮರಾಜನಗರ, ಎಂ ಶಿವಕುಮಾರ ಕೆಂಪನಪುರ,
ಡಾ. ಹೇಮಾಲತಾ ಪೀ.ಎನ್, ಡಾ. ಕಾವೇರಿ ಪ್ರಕಾಶ್, ಮಾ.ಮಹೇಶ ಮಲೆಯೂರು, ಶೀಲ ಸತ್ಯೇಂದ್ರ ಸ್ವಾಮಿ, ಓಂಕಾರ ಪ್ರಿಯ ಬಾಗೇಪಳ್ಳಿ, ಡಾ. ಕ್ಸೇವಿಯರ್ ಫ್ರಾನ್ಸಿಸ್ ದಾವಣಗೆರೆ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರೇಶ್ಮಾ ಶೆಟ್ಟಿ ಗೋರುರು ನಿರೂಪಿಸಿದರು, ವರ್ಷಾ ನಿಖಿಲ್ ರಾಜ್ ಪ್ರಾರ್ಥನೆ ಗೀತೆ ಹಾಡಿದರು, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಂದಿಸಿದರು.
ಬಳಿಕ ಗಂಗಾಧರ್ ಗಾಂಧಿ ತಂಡದಿಂದ ನಡೆದ ಗೀತ ಗಾಯನವು ಜನಮನ ಸೂರೆಗೊಂಡಿತು.
Comments are closed.