Hanumantu: ಬಿಗ್ ಬಾಸ್ ಟ್ರೋಫಿ ಗೆದ್ದ ಹನುಮಂತಗೆ ಭರ್ಜರಿ ಉಡುಗೊರೆ ಕೊಟ್ಟ ಆಂಕರ್ ಅನುಶ್ರೀ!!

Hanumantu: ಎಲ್ಲರೂ ಊಹೆ ಮಾಡಿನಂತೆ ಬಿಗ್ ಬಾಸ್ ಕನ್ನಡ ಸೀಸನ್ 11ನ ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. 50 ಲಕ್ಷ ಬಾಚಿಕೊಂಡು ಹನುಮಂತ ಮನೆಗೆ ತೆರಳಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಾಸ್ ಟ್ರೋಫಿ ಗೆದ್ದ ಹನುಮಂತಗೆ ಆಂಕರ್ ಅನುಶ್ರೀ ಅವರು ಭರ್ಜರಿ ಉಡುಗೊರೆ ಒಂದನ್ನು ನೀಡಿದ್ದಾರೆ.

ಹೌದು, ಕಪ್ಪು ಬಣ್ಣದ ಪಲ್ಸರ್ 150 ಬೈಕ್ ಅನ್ನು ಹನುಮಂತನಿಗೆ ಅನುಶ್ರೀ ಕೊಟ್ಟಿದ್ದಾರೆ. ಅದನ್ನು ಹೇಳಿಕೊಳ್ಳುವುದು ಬೇಡ ಎಂದು ಆಕೆ ನಿರ್ಧರಿಸಿದಂತಿದೆ. ಅಂದಹಾಗೆ ಆ ಬೈಕ್ ಮೇಲೆ ಅನುಶ್ರೀ ಫೋಟೊ ಕೂಡ ಇದೆ. ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಹನುಮಂತ ಲಮಾಣಿ ಮನೆಗೆ ಭೇಟಿ ನೀಡಿ ಹೋಮ್ ಟೂರ್ ವೀಡಿಯೋ ಮಾಡಿದ್ದರು. ಅದರಲ್ಲಿ ಕೂಡ ಆ ಬೈಕ್ ಅನ್ನು ತೋರಿಸಿದ್ದಾರೆ. ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಇರುವುದರಿಂದ ಬೈಕ್ ಮನೆ ಮುಂದೆ ನಿಂತಿದೆ. ಬೇರೆ ಯಾರು ಬಳಸುತ್ತಿಲ್ಲ ಎಂದು ಹೇಳಲಾಗಿತ್ತು.

ಅಂದ ಹಾಗೆ ಹನುಮಂತು ಅವರು ನಾಡಿನ ಜನತೆಗೆ ಪರಿಚಯವಾಗಿದ್ದು ಝೀ ಕನ್ನಡದ ಸರಿಗಮಪ ವೇದಿಕೆ ಮೂಲಕ. ಇದರಲ್ಲಿ ಭಾಗವಹಿಸಿ ಜನ ಮೆಚ್ಚುಗೆ ಪಡೆದಾಗ ಹನುಮಂತ ಅವರಿಗೆ ಆಂಕರ್ ಅನುಶ್ರೀ ಅವರು ಅಕ್ಕನ ಸ್ಥಾನದಲ್ಲಿ ನಿಂತು ಎಲ್ಲವನ್ನು ನೋಡಿಕೊಳ್ಳುತ್ತಿದ್ದರು. ಎಲ್ಲಿಗೆ ಹೋದರು ಹನುಮಂತನನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಈ ಅಕ್ಕ ತಮ್ಮನ ಸಂಬಂಧ ನಾಡಿನಾರ್ದ್ಯಂತ ಖ್ಯಾತಿಗಳಿಸಿತ್ತು.

Comments are closed.