Vijayanagara: ಜಮೀರ್ ಅಹಮದ್ ದ್ವಜಾರೋಹಣ ಮಾಡುತ್ತಿದ್ದಂತೆ ತುಂಡಾಗಿ ಕೆಳಗೆ ಬಿದ್ದ ರಾಷ್ಟ್ರಧ್ವಜ!!

Vijayanagara: ವಿಜಯನಗರ ಜಿಲ್ಲೆಯ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವಘಡ ನಡೆದಿದ್ದು ದೇಶದ ಅತೀ ಎತ್ತರದ ಎರಡನೇ ರಾಷ್ಟಧ್ವಜ ಧ್ವಜಸ್ಥಂಭದಿಂದ ರಾಷ್ಟಧ್ವಜ ಧ್ವಜಸ್ಥಂಭದಿಂದ ಕೆಳಗೆ ಬಿದ್ದಿದೆ.

 

ಹೌದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ 408 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ಮಾಡುತ್ತಿರುವ ವೇಳೆ ರಾಷ್ಟಧ್ವಜ ಕೆಳಗೆ ಬಿದ್ದಿದೆ.

 

ಅಂದಹಾಗೆ ವಿಜಯನಗರ(Vijayanagara)ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಅತೀ ಎತ್ತರದ ಎರಡನೇ ಅತಿದೊಡ್ಡ ರಾಷ್ಟ್ರಧ್ವಜ ಇದ್ದು, ಇಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಧ್ವಜಾರೋಹಣ ಮಾಡಿದ್ದಾರೆ. ಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರಧ್ವಜವು ಮೇಲೆರುತ್ತಿರುವಾಗ ವೈರ್ ಗಳು ಕಟ್ ಆಗಿ ಕೆಳಗೆ ಬಿದ್ದವೆ. 408 ಅಡಿ ಎತ್ತರದ ಧ್ವಜ ಸ್ತಂಭದಿಂದ ರಾಷ್ಟ್ರಧ್ವಜ ಹರಿದುಬಿದ್ದಿದೆ

Comments are closed.