Monalisa : ಕುಂಭಮೇಳದ ಸುಂದರಿ ಮೊನಾಲಿಸಾ ಮಾರು ವೇಷದಲ್ಲಿದ್ದ IAS ಆಫೀಸರ್ ?!!

Monalisa : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ(Monalisa )ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಬ್ಲಾಗರ್ಗಳು ಹಾಗೂ ರೈಲ್ ಹುಚ್ಚರ ಹಾವಳಿಯಿಂದಾಗಿ ಕೆಲವು ದಿನಗಳ ಹಿಂದೆ ಮೊನಾಲಿಸಾ ಕುಂಭಮೇಳದಿಂದ ಹೊರ ನಡೆದಿದ್ದಳು. ಆದರೆ ಈಗ ಅಚ್ಚರಿ ಎಂಬಂತೆ ಈ ಮೊನಾಲಿಸಾ ಕುಂಭಮೇಳದಲ್ಲಿ ಮಾರುವೇಶದಲ್ಲಿದ್ದ ಐಎಎಸ್ ಅಧಿಕಾರಿ ಎನ್ನಲಾಗುತ್ತಿದೆ.
ಹೌದು, ಮೊನಾಲಿಸಾಳಿಗೆ ಬಾಲಿವುಡ್ ಸಿನಿಮಾದ ಜೊತೆಗೆ ರಾಮ್ ಚರಣ್ ನಟನೆಯ ಮುಂಬರುವ ಆರ್ ಸಿ 16 ಚಿತ್ರದಲ್ಲೂ ನಟಿಸಲು ಅವಕಾಶ ಸಿಕ್ಕಿದೆ ಎಂಬ ವರದಿಗಳಿವೆ. ಈ ಬೆನ್ನಲ್ಲೇ ಈಕೆ ಐಎಎಸ್ ಆಫೀಸರ್ ಎಂಬ ಸುದ್ದಿ ವೈರಲಾಗುತ್ತಿದೆ. ಈ ಕುರಿತಾದ ಫೋಟೋಗಳು ಎಲ್ಲೆಡೆ ಸದ್ದು ಮಾಡುತ್ತಿದೆ.
ಅಂದಹಾಗೆ ಇದರ ಅಸಲಿ ವಿಚಾರವನ್ನು ಬೆನ್ನು ಹತ್ತಿ ಹೋದಾಗ ಕಿಡಿಗೇಡಿಗಳು AI ಮೂಲಕ ಮೊನಾಲಿಸಾ ಅವರು ಐಎಎಸ್ ಅಧಿಕಾರಿಯ ರೂಪದಲ್ಲಿರುವ ಫೊಟೋಗಳನ್ನು ರಚಿಸಿ ವೈರಲ್ ಮಾಡುತ್ತಿರುವದು ತಿಳಿದು ಬಂದಿದೆ. 16 ವರ್ಷದ ಮೊನಾಲಿಸಾ IAS ಅಧಿಕಾರಿ ಎನ್ನುವುದು ಶುದ್ಧ ಸುಳ್ಳು. ಇದೇಲ್ಲ ಕಿಡಿಗೇಡಿಗಳ ಕೈವಾಡ ಎಂಬುದು ನಂತರ ಬಯಲಾಗಿದೆ.
Comments are closed.