Oyo :Oyo ರೂಮ್ ನಲ್ಲಿ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಜೋಡಿಹಕ್ಕಿ – ಇವರ ಕೆಲಸ ಕಂಡು ಪೊಲೀಸರೇ ಶಾಕ್ !!

Oyo: ಓಯೋ ರೂಮ್ಸ್ ಇದೀಗ ದೇಶಾದ್ಯಂತ ಟ್ರೆಂಡ್‌ನಲ್ಲದೆ. ಇಂದು ಇದು ಪ್ರೇಮಿಗಳು, ಯುವಕರು -ಯುವತಿಯರ ತಾಣವಾಗಿಬಿಟ್ಟಿದೆ. ಅಚ್ಚರಿ ಅಂದ್ರೆ ಈಗ ಇದೇ ಓಯೋ ರೂಮ್ಸ್‌ನಲ್ಲಿ ಪ್ರೇಮಿಗಳಿಬ್ಬರು ಮಾಡಬಾರದ್ದನ್ನ ಮಾಡಿ ಪೊಲೀಸರ ಕೈಗೆ ತಗ್ಲಾಕೊಂಡ ಘಟನೆ ನಡೆದಿದೆ.

ಹೌದು, ಹೈದರಾಬಾದ್ ನಗರದ ಕೊಂಡಾಪುರದ ಓಯೋ ರೂಮ್ಸ್‌ನಲ್ಲಿ ಪ್ರೇಮಿಗಳಿಬ್ಬರು ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾರೆ. ಅದೇನೆಂದರೆ ಅಂತರರಾಜ್ಯ ಪ್ರೇಮಿಗಳಿಬ್ಬರು ತುಂಬಾ ದುಡ್ಡು ಮಾಡಿ ಐಶಾರಾಮಿ ಜೀವನ ಸಾಗಿಸೋಣ ಎನ್ನುವ ಯೋಜನೆ ಹಾಕಿಕೊಂಡು ಮಾಡಿ ಗಾಂಜಾ ವ್ಯಾಪಾರ ಶುರು ಮಾಡಿದ್ದಾರೆ. ಈ ಕಳ್ಳ ಜೋಡಿ ಪೊಲೀಸರ ಕೈಗೆ ಸಿಗದೇ ಇರಲು ಓಯೋ ರೂಮ್‌ನಲ್ಲಿ ಉಳಿದುಕೊಂಡು ಅಲ್ಲಿಂದಲೇ ಗಾಂಜಾ ದಂಧೆ ಆರಂಭ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಅಂದಹಾಗೆ ಇದರ ಸುಳಿವು ಸಿಕ್ಕ ಕೂಡಲೇ ಪೊಲೀಸರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಯುವಕ ಹಾಗೂ ಯುವತಿಯನ್ನ ಎಸ್‌ಟಿಎಫ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ಕವಾಲಿಯ ದೇವೆಂದೂಲ ರಾಜು (25) ಮಧ್ಯಪ್ರದೇಶದ ಸಂಜನಾ ಮಂಜ (18) ಬಂಧಿತರಾಗಿದ್ದಾರೆ. ಇವರು ಭೇಟಿಯಾದ ಕೆಲವೇ ದಿನಗಳಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬಳಿಕ ಹಣ ಗಳಿಸುವ ಯೋಜನೆ ರೂಪಿಸಿದ್ದು, ಒಯೋ ರೂಮ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು. ಇವರಿಬ್ಬರು ಕೊಂಡಾಪುರದ ಓಯೋ ರೂಮ್‌ನಲ್ಲಿ ತಂಗಿದ್ದು, ತುಂಬಾ ದಿನಗಳಿಂದ ಗಾಂಜಾ ದಂಧೆ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಎಸ್‌ಟಿಎಫ್ ತಂಡ ತಪಾಸಣೆ ನಡೆಸಿ ದಾಳಿ ನಡೆಸಿದೆ. ಇಬ್ಬರೂ ಬೇರೆ ಬೇರೆ ಕಡೆಯಿಂದ ಗಾಂಜಾ ತಂದು ಓಯೋ ಕೊಠಡಿಯಿಂದ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Comments are closed.