Mangalore: ಮಸಾಜ್ ಸೆಂಟರಿಗೆ ಶ್ರೀರಾಮ ಸೇನೆ ಕಾರ್ಯಕರ್ತರ ದಾಳಿ

Mangalore: ಶ್ರೀರಾಮ ಸೇನೆ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಳಿಯ ಮಸಾಜ್ ಸೆಂಟರ್‌ವೊಂದಕ್ಕೆ ದಾಳಿ ಮಾಡಿರುವ ಘಟನೆಯೊಂದು ಗುರುವಾರ (ಜ.23) ದ ಮಧ್ಯಾಹ್ನದೊತ್ತಿಗೆ ನಡೆದಿದೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆರೋಪದ ಮೇರೆಗೆ ದಾಳಿ ಮಾಡಲಾಗಿದೆ.
ಮಸಾಜ್ ಪಾರ್ಲರ್‌ನ ಪೀಠೋಪಕರಣ, ಕಂಪ್ಯೂಟರ್ ಸೆಟ್, ಟೇಬಲ್‌ಗಳನ್ನು ಪುಡಿ ಮಾಡಲಾಗಿದೆ. ಅಲ್ಲಿದ್ದ ಹುಡುಗಿಯರಲ್ಲಿ ನೀವು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದೀರಾ? ಎಂದ ಪ್ರಶ್ನೆ ಮಾಡಿದ್ದಾರೆ. ಅಲ್ಲಿದ್ದ ಹುಡುಗಿಯರು ಕೈ ಮುಗಿದು ಹಲ್ಲೆ ಮಾಡಬೇಡಿ ಎನ್ನುವ ವೀಡಿಯೋವಿದೆ.
ಸುಧೀರ್ ಎಂಬುವವರಿಗೆ ಸೇರಿದ ಮಸಾಜ್ ಪಾರ್ಲರ್ ಇದಾಗಿದೆ. ಶ್ರೀರಾಮ ಸೇನೆ ಸಂಘಟನೆಯ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಹುಡುಗರು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
Comments are closed.