Resignation: ಮಾಲೀಕನ ಕೆಲಸದ ರಾಜೀನಾಮೆ ಪತ್ರ ಇ-ಮೇಲ್‌ ಮಾಡಿದ ಬೆಕ್ಕು!

Resignation: ಬೀಜಿಂಗ್‌: ಚೀನಾದಲ್ಲಿ ಬೆಕ್ಕೊಂದು ತನ್ನ ಒಡತಿಯ ರಾಜೀನಾಮೆ ಪತ್ರವನ್ನು ಇ-ಮೇಲ್‌ ಮೂಲಕ ಕಳುಹಿಸಿದ ಘಟನೆಯೊಂದು ನಡೆದಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅನ್ನೋ ರೀತಿಯಲ್ಲಿ ಇದೀಗ ಮಹಿಳೆ ತನ್ನ ಕೆಲಸ ಕಳೆದುಕೊಂಡಿದ್ದಾರೆ.

25 ವರ್ಷದ ಮಹಿಳೆಯೊಬ್ಬರು ಚೀನಾದ ಚಾಂಗ್‌ಕಿಂಗ್‌ನಲ್ಲಿ ವಾಸ ಮಾಡುತ್ತಿದ್ದರು. ಈಕೆ ಜ.5 ರಂದು ತನ್ನ ರಾಜೀನಾಮೆ ಪತ್ರವನ್ನು ಇ-ಮೇಲ್‌ ನಲ್ಲಿ ಬರೆದಿಟ್ಟಿದ್ದಳು. ಆದರೆ ಅದನ್ನು ಕಳುಹಿಸಬೇಕೇ? ಬೇಡವೇ ? ಎಂಬ ನಿರ್ಧಾರ ಇನ್ನೂ ಆಗಿರಲಿಲ್ಲ. ಹಾಗಾಗಿ ಲ್ಯಾಪ್‌ಟಾಪನ್ನು ಟೇಬಲ್‌ ಮೇಲೆ ಇಟ್ಟು ತನ್ನ ಪಾಡಿಗೆ ಬೇರೆ ಕೆಲಸ ಮಾಡಲೆಂದು ಹೋಗಿದ್ದಳು. ಆಗ ಮನೆಯ ಸಾಕು ಬೆಕ್ಕು ಬಂದು ಟೇಬಲ್‌ ಮೇಲಿದ್ದ ಲ್ಯಾಪ್‌ಟ್ಯಾಪ್‌ ಮೇಲೆ ಹಾರಿ ʼಸೆಂಡ್‌ ಬಟನ್‌ʼ ಒತ್ತಿ ಬಿಟ್ಟಿದೆ. ಮಹಿಳೆಯ ರೆಸಿಗ್ನೇಶನ್‌ ಲೆಟರ್‌ ಬಾಸ್‌ಗೆ ಮುಟ್ಟಿದೆ.

ತಕ್ಷಣವೇ ಮಹಿಳೆ ಬಾಸ್‌ಗೆ ಕರೆ ಮಾಡಿ ಬೆಕ್ಕಿನಿಂದಾಗಿ ಈ ರೀತಿ ಆಗಿದೆ, ನಾನು ಕಳುಹಿಸಿಲ್ಲ ಎಂದು ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಬಾಸ್‌ ಮನಸ್ಸು ಕರಗದೇ, ರೆಸಿಗ್ನೇಶನ್‌ನನ್ನು ಸ್ವೀಕಾರ ಮಾಡಿದ್ದು, ವರ್ಷದ ಅಂತ್ಯಕ್ಕೆ ಸಿಗುವ ಬೋನಸ್‌ಗೆ ಕತ್ತರಿ ಬಿದ್ದಿರುವ ಜೊತೆಗೆ ಕೆಲಸದಿಂದನೂ ತೆಗೆದು ಹಾಕಿದ್ದಾರೆ.

Comments are closed.