Mumbai : ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ 20ರ ಯುವತಿ – ಆಕೆಯ ಗುಪ್ತಾಂಗದಲ್ಲಿತ್ತು ಬ್ಲೇಡ್ !!

Mumbai: ಇಂದಿನ ಪೀಳಿಗೆಯ ಜನ ಎಷ್ಟು ಅಮಾನುಷವಾಗಿ ವರ್ತಿಸುತ್ತಾರೆ ಎಂದರೆ ಅದನ್ನು ನಾವಿಲ್ಲಿ ಹೇಳಲು ಕೂಡ ತುಂಬಾ ಅಸಹ್ಯ ಮಾತ್ರವಲ್ಲ ನೋವು ಎನಿಸುತ್ತದೆ. ಹೌದು, ಮುಂಬೈ ನಗರದಲ್ಲಿ ನಡೆದಿರುವಂತಹ ಈ ಒಂದು ಘಟನೆಯ ಬಗ್ಗೆ ಕೇಳಿದರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ.

ಅದೇನೆಂದರೆ ಸುಮಾರು 20 ವರ್ಷದ ಯುವತಿಯೊಬ್ಬಳು ಮುಂಬೈನ ಗೋರೆಗಾಂವ್‌ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಚಿಕಿತ್ಸೆಗೆ ಒಳಪಡಿಸಿ ನೋಡಿದಾಗ ಅವಳ ಗುಪ್ತಾಂಗದಲ್ಲಿ ಸರ್ಜಿಕಲ್‌ ಬ್ಲೇಡ್‌ಗಳು ಪತ್ತೆಯಾಗಿ ಆಘಾತ ಮೂಡಿಸಿದೆ. ಸದ್ಯ ಪ್ಯಾಕೆಟ್‌ನಲ್ಲಿ ಸುತ್ತಿಟ್ಟಿದ್ದ ಬ್ಲೇಡ್‌ ಅನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಯುವತಿ ಹೇಳಿದ್ದೇನು?
ಮೂಲಗಳ ಪ್ರಕಾರ ಸಂತ್ರಸ್ತ ಯುವತಿಯ ಹೇಳಿಕೆಗಳು ಪೊಲೀಸರಿಗೆ ಗೊಂದಲ ಮೂಡಿಸಿದೆ. ಜನವರಿ 20 ರಂದು ಯುವತಿ ತನ್ನ ಚಿಕ್ಕಪ್ಪನೊಂದಿಗೆ ಲಕ್ನೋ ಅಥವಾ ಬನಾರಸ್‌ನಿಂದ ಬಂದಿರುವುದಾಗಿ ಅವಳು ಹೇಳಿದ್ದಾಳೆ. ಆಕೆಯ ಹೇಳಿಕೆಯ ಪ್ರಕಾರ ಬಾಂದ್ರಾ ನಿಲ್ದಾಣವನ್ನು ತಲುಪಿದ ನಂತರ ಆಕೆ ಗೋರೆಗಾಂವ್‌ಗೆ ಪ್ರಯಾಣಿಸಿದ್ದಾಳೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಹಾಗೂ ಬಲವಂತವಾಗಿ ಬ್ಲೇಡ್ ಅನ್ನು ಗುಪ್ತಾಂಗಕ್ಕೆ ಸೇರಿಸಲಾಗಿದೆ. ಆದರೆ ಆಕೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿಯೂ ಗೋರೆಗಾಂವ್‌ಗೆ ಹೇಗೆ ತಲುಪಿದಳು ಎಂಬುದನ್ನು ಆಕೆ ವಿವರಿಸಿಲ್ಲ. ಇದು ಪೊಲೀಸರಿಗೆ ಗೊಂದಲವಾಗಿ ಕೂಡಿದೆ.

ಈಗ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿ ತಣಿಕೆಯನ್ನು ಆರಂಭಿಸಿದ್ದಾರೆ. ಯುವತಿ ಬೇರೆ ಬೇರೆ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಠಿಸಿದ್ದಾಳೆ. ಹೀಗಾಗಿ ಹಿರಿಯ ಅಧಿಕಾರಿಗಳು ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Comments are closed.