200 Cops: ದಲಿತ ಯುವಕನ ಮದುವೆಗೆ 200 ಪೊಲೀಸರಿಂದ ಭದ್ರತೆ

200 Cops: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ದಲಿತ ಸಮುದಾಯದ ವರನ ವಿವಾಹ ಮೆರವಣಿಗೆಗೆ ಗ್ರಾಮದ ಮೇಲ್ಜಾತಿ ಜನರು ಅಡ್ಡಿಪಡಿಸಬಹುದೆಂಬ ಕಾರಣದಿಂದ 200 ಮಂದಿ ಪೊಲೀಸರ ಭದ್ರತೆಯಲ್ಲಿ ನಡೆದಿರುವ ಘಟನೆಯೊಂದು ನಡೆದಿದೆ. ಯುವಕ ದಲಿತನಾಗಿದ್ದು, ಆತನಿಗೆ ಕುದುರೆ ಮೇಲೇರಿ ದಿಬ್ಬಣ ಹೋಗಬೇಕೆಂಬ ಆಸೆ ಇತ್ತು. ಆದರೆ ಆ ಊರಿನ ಮೇಲ್ವರ್ಗದ ಜನರು ಕೆಳವರ್ಗದ ಜನರಿಗೆ ಕುದುರೆ ಮೇಲೆ ದಿಬ್ಬಣ ಹೋಗಲು ಅವಕಾಶ ನೀಡುವುದಿಲ್ಲ. ಹೀಗಾಗಿ ಮೆರವಣಿಗೆ ಸಂದರ್ಭ ಗಲಾಟೆ ನಡೆಯಬಾರದೆಂಬ ಉದ್ದೇಶದಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಜ.21 ರಂದು ಜಿಲ್ಲೆಯ ಲಾವೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅರುಣಾ ಖೋರ್ವಾಲ್ ಅವರ ಕುಟುಂಬ ಸದಸ್ಯರು ಪೊಲೀಸ್ ಆಡಳಿತವನ್ನು ಸಂಪರ್ಕಿಸಿ ಮದುವೆ ಮೆರವಣಿಗೆ ಮತ್ತು ಮದುವೆಯ ಮೆರವಣಿಗೆಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮೆರವಣಿಗೆ ಇತ್ಯಾದಿ ಭದ್ರತೆಗಾಗಿ ಆಡಳಿತ ಸುಮಾರು 200 ಪೊಲೀಸರನ್ನು ನಿಯೋಜಿಸಿತ್ತು.

ಅದರಂತೆ ಮದುಮಗ ತನ್ನ ಮನೆಯಿಂದ ಮದುಮಗಳ ಮನೆಗೆ ಕುದುರೆ ಮೇಲೇರಿ ಸಾಗಿದ್ದು, ಇತ್ತ ಮದುಮಗನ ಕುಟುಂಬದವರು ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದ್ದಾರೆ. ಪೊಲೀಸರು ಎರಡೂ ಬದಿಯಲ್ಲಿ ವರನ ಕಡೆಯವರಿಗೆ ಭದ್ರತೆ ನೀಡುತ್ತಾ ದಿಬ್ಬಣದ ಜೊತೆ ಹೋಗುವ ವೀಡಿಯೋ ವೈರಲ್‌ ಆಗಿದೆ.

ವರನ ವಿಜಯ್ ರೇಗರ್ ಕುದುರೆ ಮೇಲೆ ಸವಾರಿ ಮಾಡುತ್ತಾ ವಧುವಿನ ಮನೆಗೆ ತಲುಪಿ, ನಂತರ ಸಾಂಪ್ರದಾಯಿಕ ‘ಬಿಂಡೋಲಿ’ ಆಚರಣೆಯನ್ನು ಮಾಡಲಾಯಿತು.

ಈ ಹಿಂದೆ ಇಲ್ಲಿ ಮದುವೆ ಮೆರವಣಿಗೆ ವೇಳೆ ಅಹಿತಕರ ಘಟನೆಗಳು ನಡೆದಿದ್ದರಿಂದ ಪೊಲೀಸರು ಸುರಕ್ಷತೆಯನ್ನು ನೀಡಿದ್ದಾರೆ.

Comments are closed.