Naga Sadhu: ಬೆತ್ತಲಾಗಿ ಓಡಾಡೋ ಮಹಿಳಾ ನಾಗ ಸಾಧುಗಳು ಪಿರಿಯಡ್ಸ್ ಆದಾಗ ಏನು ಮಾಡುತ್ತಾರೆ?

Naga Sadhu: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಯಿಂದಲೂ ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. 13 ಅಖಾಡಗಳ ನಾಗಾ ಸಾಧುಗಳು ಮತ್ತು ಮಹಿಳಾ ಸಾಧ್ವಿಗಳು ಪ್ರಯಾಗರಾಜ್‌ ಗೆ ಬಂದಿದ್ದಾರೆ. ಅದರಲ್ಲೂ ಮಹಿಳಾ ನಾಗಸಾಧುಗಳ ವಿಚಾರವಂತೂ ತುಂಬಾ ಅಚ್ಚರಿ ಅನಿಸುತ್ತದೆ.

ಹೌದು, ಕುಂಭಮೇಳದ ವಿಶೇಷತೆಗಳಲ್ಲಿ ಮಹಿಳಾ ನಾಗಸಾಧುಗಳು ಕೂಡ ಒಂದು. ಅವರ ಆಚಾರ ವಿಚಾರ ನಡೆ-ನುಡಿಗಳು ಎಲ್ಲವೂ ಕೂಡ ಬಲು ಅಪರೂಪದ್ದವು. ಇದೀಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆ ಎಂದರೆ ಮಹಾ ಕುಂಭ ಮೇಳಕ್ಕೆ ಬಂದ ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್‌ ಸಮಯದಲ್ಲಿ ಏನು ಮಾಡುತ್ತಾರೆ ಎಂಬುದು? ಅದಕ್ಕೆ ಇಲ್ಲಿದೆ ನೋಡಿ ಉತ್ತರ.

ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್‌ ಇರದ ದಿನಗಳಲ್ಲಿ ಮಾತ್ರ ಗಂಗಾ ಸ್ನಾನ ಮಾಡುತ್ತಾರೆ. ಕುಂಭಮೇಳದ ಸಮಯದಲ್ಲಿ ಪಿರಿಯಡ್ಸ್‌ ಆದರೆ ತನ್ನ ಮೇಲೆ ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ಬರುತ್ತಾರೆ. ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದಿಲ್ಲ.

ಮಹಿಳೆಯರು ನಾಗಸಾಧುವಾಗಲು ಏನು ಮಾಡಬೇಕು?
ನಾಗ ಸಾಧು ಆಗಲು 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಮಹಿಳಾ ನಾಗ ಸಾಧು ಆಗಲು ಅರ್ಹಳು ಮತ್ತು ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾಳೆ ಎಂದು ಗುರುಗಳಿಗೆ ಭರವಸೆ ನೀಡಬೇಕು. ಇದಾದ ನಂತರ ಗುರುಗಳು ನಾಗ ಸಾಧು ಆಗಲು ಅನುಮತಿ ನೀಡುತ್ತಾರೆ. ನಾಗ ಸಾಧುವಾಗುವ ಮೊದಲು ಮಹಿಳೆಯ ಹಿಂದಿನ ಜೀವನವನ್ನು ನೋಡಿ ಅವಳು ದೇವರಿಗೆ ಭಕ್ತಿ ಹೊಂದಿದ್ದಾಳೋ ಇಲ್ಲವೋ ಮತ್ತು ನಾಗ ಸಾಧುವಾದ ನಂತರ ಅವಳು ಕಷ್ಟಕರವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ನಾಗಾ ಸಾಧುವಾಗುವ ಮೊದಲು, ಮಹಿಳೆ ಜೀವಂತವಾಗಿರುವಾಗಲೇ ತನಗೆ ತಾನೇ ಪಿಂಡ ದಾನ ಮಾಡಬೇಕು ಮತ್ತು ತಲೆ ಬೋಳಿಸಿಕೊಳ್ಳಬೇಕು.

Comments are closed.