Putturu: ಶಾಲೆಯಲ್ಲಿ ಮಗ್ಗಿ ತಪ್ಪಿ ಹೇಳಿದಕ್ಕೆ ನಾಗರಬೆತ್ತದಿಂದ ಪೆಟ್ಟು ತಿಂದ ವಿದ್ಯಾರ್ಥಿ

 

Putturu: ಮಗ್ಗಿ ಹೇಳುವಾಗ ತಪ್ಪಿತ್ತೆಂದು ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಹೊಡೆದಿರುವ ಘಟನೆಯ ಕುರಿತು ಆರೋಪ ಕೇಳಿ ಬಂದಿದೆ. ಪುತ್ತೂರು ತಾಲೂಕು ಪಾಪೆಮಜಲು ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 8 ನೇ ತರಗತಿ ಅತೀಶ್‌ ಹೊಡೆತ ತಿಂದ ವಿದ್ಯಾರ್ಥಿ. ಸಂಜೆ ಸಮಯದಲ್ಲಿ ಆತೀಶ್‌ ತಾಯಿ ಅನಿತಾ ಮತ್ತು ಅಜ್ಜ ರವಿ ಅವರಲ್ಲಿ ಕೈ ನೋವು ವಿಚಾರ ತಿಳಿಸಿ, ಶಾಲೆಯಲ್ಲಿ ನಡೆದ ಘಟನೆಯನ್ನು ಹೇಳಿದ್ದಾನೆ.

ಶಿಕ್ಷಕರು ನಾಗರಬೆತ್ತದಿಂದ ವಿದ್ಯಾರ್ಥಿಗೆ ಹೊಡೆದಿದ್ದು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಬಾಲಕನ ಎಡ ಕೈ ಮೂಳೆಗೆ ಗಾಯವಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯನ್ನು ಅಜ್ಜ ರವಿ ಸರಕಾರಿ ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ. ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಕೈ ಊನಗೊಂಡಿದೆ ಎಂದು ಅಜ್ಜ ರವಿ ಹೇಳಿದ್ದಾರೆ.

Comments are closed.