Mangalore: ಮಂಗಳೂರಿನ ವ್ಯಕ್ತಿಗೆ ಹಣ ಡಬಲ್‌ ಆಮಿಷ; 14.31 ಲಕ್ಷ ರೂ. ಗುಳುಂ

Mangalore : ಹಣ ಡಬಲ್‌ ಮಾಡುವ ಆಮಿಷವೊಡ್ಡಿ ಸೈಬರ್‌ ವಂಚಕರು ಮಂಗಳೂರಿನ ವ್ಯಕ್ತಿಯೋರ್ವರಿಗೆ ಬರೋಬ್ಬರಿ 14.31 ಲಕ್ಷ ರೂಪಾಯಿ ವಂಚನೆ ಮಾಡಿರುವ ಕುರಿತು ವಂಚನೆಗೊಳಗಾದ ವ್ಯಕ್ತಿ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅ.6, 2024 ರಂದು ಶೇರ್‌ ಮಾರ್ಕೆಟ್‌ ಹೂಡಿಕೆ ಮಾಡುವ ಕುರಿತು ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವ ಸಂದರ್ಭದಲ್ಲಿ ಸರ್ಚ್‌ ಮಾಡುವಾಗ, ಟೆಲಿಗ್ರಾಂ ಪೇಜ್‌ ಓಪನ್‌ ಆಗಿದ್ದು, ಆ ಟೆಲಿಗ್ರಾಂ ಗ್ರೂಪ್‌ಗೆ ಜಾಯಿನ್‌ ಆದಾಗ ಮನಿ ಇನ್ವೆಸ್ಟ್‌ ಎಂಬ ಮೆಸೇಜ್‌ ಇತ್ತು. ಅಂದರೆ ರೂ.5000 ಇನ್ವೆಸ್ಟ್‌ ಮಾಡಿದರೆ ರೂ.20000 ಲಾಭಾಂಶ ಬರುವ ಮೆಸೇಜ್‌ವೊಂದು ಬಂದಿದ್ದು, ಅದರ ಕೆಳಗಡೆ ವಾಟ್ಸಪ್‌ ಲಿಂಕ್‌ ಇದ್ದು, ಆ ಲಿಂಕನ್ನು ಪ್ರೆಸ್‌ ಮಾಡಿದಾಗ ವಂಚಕರಿಗೆ ಕನೆಕ್ಟ್‌ ಆಗಿದೆ.

ಇದನ್ನು ನಂಬಿ ವ್ಯಕ್ತಿ ರೂ.5000 ಹೂಡಿಕೆ ಮಾಡಿದ್ದಾರೆ. ಡಬಲ್‌ ಹಣ ಸಿಗುವುದಾಗಿ ಆರೋಪಿಗಳು ಹೇಳಿದ್ದಾರೆ. ಈ ರೀತಿ ವ್ಯಕ್ತಿ 27-10-2024 ರಿಂದ 19-12-2024 ರವರೆಗೆ ಒಟ್ಟು 14,36,601 ರೂ. ಹಣ ವರ್ಗಾವಣೆ ಮಾಡಿ ಮೋಸ ಹೋಗಿರುವುದಾಗಿ ದೂರಿನಲ್ಲಿ ವ್ಯಕ್ತಿ ಉಲ್ಲೇಖ ಮಾಡಿದ್ದಾರೆ. ಆರೋಪಿಗಳು ಹಣ ಡಬಲ್‌ ಮಾಡಿಕೊಡದೇ, ಇನ್ವೆಸ್ಟ್‌ ಮಾಡಿದ ಹಣವನ್ನೂ ವಾಪಸ್‌ ಕೊಡದೆ ಮೋಸ, ವಂಚನೆ ಮಾಡಿರುವುದಾಗಿ ಸಂತ್ರಸ್ತ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Comments are closed.