Chaitra Kundapura : ಬಿಗ್ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ – ಕಿರಿಕ್‌ ಕೀರ್ತಿ ಮದುವೆ?!

Chaitra Kundapura : ಹಿಂದುತ್ವದ ಫೈಯರ್ ಬ್ರಾಂಡ್, ಮಾತಿನ ಮಲ್ಲಿ ಚೈತ್ರ ಕುಂದಾಪುರ ಈಗ ನಾಡಿನ ಜನಕ್ಕೆ ಚಿರಪರಿಚಿತರು. ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ಬೆನ್ನಲ್ಲೇ ಚೈತ್ರ ಕುಂದಾಪುರ ಮತ್ತು ಕಿರಿಕ್ ಕೀರ್ತಿಯವರು ಮದುವೆಯಾಗುತ್ತಾರೆ ಎಂಬ ಸುದ್ದಿ ಒಂದು ಸದ್ದು ಮಾಡುತ್ತಿದೆ.

ಹೌದು, ಬಿಗ್‌ ಬಾಸ್‌ ಕಾರ್ಯಕ್ರಮ, ಸ್ಪರ್ಧಿಗಳ ವಯಕ್ತಿಕ ಮಾಹಿತಿ ಕುರಿತು ಸಾಕಷ್ಟು ಪೋಸ್ಟ್‌ಗಳು ವೈರಲ್‌, ಥ್ರೋಲ್‌ ಆಗುತ್ತವೆ. ಅಂತೆಯೇ ಇದೀಗ ಬಿಗ್‌ ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ, ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಮತ್ತೊಬ್ಬ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಮದುವೆಯಾಗುತ್ತಿದ್ದಾರೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://www.facebook.com/share/p/1DRGrfHBf3/

ಆಶೀಶ್‌ ಮೈಕಾಲ ಎಂಬ ಫೇಸ್‌ಬುಕ್‌ ಬಳಕೆದಾರು ಚೈತ್ರಾ ಕುಂದಾಪುರ ಹಾಗೂ ಕಿರಿಕ್‌ ಕೀರ್ತಿ ಜತೆಗೆ ನಿಂತಿರುವ ಫೋಟೋ ಹಾಕಿ ” BREAKING NEWS ಅತೀ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿಗಳು: ಕೀರ್ತಿ ಮತ್ತು ಜೈತ್ರಾ ಕುಂದಾಪುರ ” ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಸುಳ್ಳು ಸುದ್ದಿ ಎಂಬುದು ಇದೀಗ ಸಾಬೀತಾಗಿದೆ.

ಅಸಲಿಗೆ ಆದದ್ದೇನು?
ಸಜಗ್‌ ತಂಡವು ಈ ವೈರಲ್‌ ಪೋಸ್ಟ್‌ ಬಗ್ಗೆ ತನಿಖೆ ನಡೆಸಿದ್ದು ವೈರಲ್‌ ಆದ ಚೈತ್ರಾ ಕುಂದಾಪುರ ಹಾಗೂ ಕಿರಿಕ್‌ ಕೀರ್ತಿ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹಾಕಿದಾಗ ಇತ್ತೀಚೆಗೆ ಕಿರಿಕ್ ಕೀರ್ತಿಯವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋ ಲಭ್ಯವಾಗಿದೆ. ಆ ಬಳಿಕ ಕಿರಿಕ್‌ ಕೀರ್ತಿ ಅವರ ಫೇಸ್‌ಬುಕ್‌ ಖಾತೆಯನ್ನು ಪರಿಶೀಲನೆ ನಡೆಸಿದಾಗ ಚೈತ್ರಾ ಕುಂದಾಪುರ ಅವರು ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಸಂದರ್ಶನ ನಡೆಸಿರುವುದಾಗಿ ಕಿರಿಕ್‌ ಕೀರ್ತಿ ಬರೆದುಕೊಂಡಿದ್ದಾರೆ. ಆದ್ರೆ ಇಲ್ಲಿ ಯಾವುದೇ ಮದುವೆಯ ಪ್ರಸ್ತಾಪ ಸುದ್ದಿಯೇ ಇಲ್ಲ.

ಇನ್ನು ಈ ಬಗ್ಗೆ ಸಜಗ್‌ ತಂಡವು ನೇರವಾಗಿ ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದಾಗ ಇದೊಂದು ಸುಳ್ಳು ಮಾಹಿತಿ ಎಂದು ತಿಳಿದುಬಂದಿದೆ. ಸ್ವತಃ ಚೈತ್ರಾ ಕುಂದಾಪುರ ಅವರೇ ಮಾತನಾಡಿದ್ದು, ” ನನ್ನ ಮದುವೆಯ ಬಗ್ಗೆ ಈ ತರ ಸಾಕಷ್ಟು ಸುಳ್ಳು ಫೋಸ್ಟ್‌ಗಳು ಹರಿದಾಡುತ್ತಿವೆ. ಈ ಹಿಂದೆ ಶೈನ್‌ಶೆಟ್ಟಿ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ಸುಳ್ಳು ಮಾಹಿತಿ ವೈರಲ್ ಆಗಿತ್ತು. ಈಗ ಕಿರಿಕ್‌ ಕೀರ್ತಿ ಅವರ ಜತೆ ಮದುವೆ ಎಂದು ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕೀರ್ತಿ ಅವರು ನನಗೆ ಸಹೋದರನ ಸಮಾನ’ ಎಂದು ಹೇಳಿದ್ದಾರೆ.

Comments are closed.