Chaitra Kundapura :5 ಕೋಟಿ ವಂಚನೆಯ ಗುಟ್ಟನ್ನು ರಟ್ಟು ಮಾಡಿದ ಚೈತ್ರ ಕುಂದಾಪುರ !! ನಿಜಕ್ಕೂ ಇದು ಸಾಧ್ಯನಾ?

Chaitra Kundapura : ಹಿಂದುತ್ವದ ಫೈಯರ್ ಬ್ರಾಂಡ್, ಮಾತಿನ ಮಲ್ಲಿ ಚೈತ್ರ ಕುಂದಾಪುರ ಈಗ ನಾಡಿನ ಜನಕ್ಕೆ ಚಿರಪರಿಚಿತರು. ಅವರು ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮೊದಲು ತಮ್ಮ ಪ್ರಖರವಾದ ಭಾಷಣಗಳಿಂದ ಹಲವರಿಗೆ ಅಚ್ಚುಮೆಚ್ಚಿನಿಸಿದ್ದರೆ ಇನ್ನು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಸಮಯದಲ್ಲಿ ಚೈತ್ರ ಕುಂದಾಪುರ(Chaitra Kundapura )ಎಂದರೆ ಹಿಂದುತ್ವದ ಕಿಡಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಸಮಯದಲ್ಲಿ ಅವರಿಗೆ ಮಗ್ಗುಲ ಮುಳ್ಳಾಗಿ ಕಾಡಿದ್ದು 5 ಕೋಟಿ ವಂಚನೆಯ ಕೇಸ್.
ಹೌದು, ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಉದ್ಯಮಿ ಒಬ್ಬರಿಗೆ ಟಿಕೆಟ್ ಕೊಡಿಸೋ ಆಮಿಷ ಒಡ್ಡಿ 5 ಕೋಟಿ ರೂಪಾಯಿ ಹಣ ಪಡೆದ ಗಂಭೀರ ಆರೋಪ ಚೈತ್ರ ಕುಂದಾಪುರ ಅವರ ಮೇಲೆ ಬಂದಿತ್ತು. ಈ ಕೇಸ್ ನಿಂದಾಗಿ ಅವರು ಜೈಲು ವಾಸ ಕೂಡ ಅನುಭವಿಸಿದ್ದರು. ಈ ಬೆಳವಣಿಗೆಯಿಂದ ಚೈತ್ರ ಕುಂದಾಪುರ ಇಮೇಜಿಗೆ ಡ್ಯಾಮೇಜ್ ಆಗಿದ್ದಂತೂ ಖಂಡಿತ. ಈ ಘಟನೆಯ ಬಳಿಕ ಚೈತ್ರ ಅಷ್ಟೊಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಅವರನ್ನು ಮತ್ತೆ ಮುಖ್ಯವಾಹಿನಿಗೆ ತಂದದ್ದು ಬಿಗ್ ಬಾಸ್ ವೇದಿಕೆ. ಯಸ್, ಚೈತ್ರ ಕುಂದಾಪುರ ಅವರಿಗೆ ಬಿಗ್ ಬಾಸ್ ಮರುಜೀವನವನ್ನು ನೀಡಿದೆ. ಕೆಲವೇ ಕೆಲವು ಮಂದಿಗೆ ಚೈತ್ರ ಎಂದರೆ ಯಾರು ಎಂದು ತಿಳಿದಿತ್ತು.ಆದರೆ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಅವರ ವರ್ಚಸ್ಸು ಈಗ ನಾಡಿಗೆ ತಿಳಿದಿದೆ.
ಅಂದಹಾಗೆ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಇನ್ನೂ ಕೇವಲ 15 ದಿನ ಇರುವಾಗ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಟ್ ಆದ ಬಳಿಕ ಹಲವು ಮಾಧ್ಯಮಗಳು ಅವರನ್ನು ಸಂದರ್ಶನ ಮಾಡಿವೆ. ಈ ವೇಳೆ ಹಳೆಯ ವಿಚಾರಗಳು ಕೂಡ ಚರ್ಚೆಗೆ ಬಂದಿದೆ. ಅಂತಿಗೆ 5 ಕೋಟಿ ವಂಚನೆಯ ಕೇಸ್ ಕೂಡ ಚರ್ಚೆಗೆ ಒಳಪಟ್ಟಿದ್ದು, ಈ ಕುರಿತಾಗಿ ಚೈತ್ರ ಕುಂದಾಪುರ ಅವರಿಗೆ ಪ್ರಶ್ನೆ ಎದುರಾಗಿದೆ. ಈ ಸಂದರ್ಭದಲ್ಲಿ ಚೈತ್ರ ಕುಂದಾಪುರ ಅವರು 5 ಕೋಟಿ ವಂಚನೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಯಸ್, ಈ ಪ್ರಕರಣದ ಕುರಿತು ಪ್ರಶ್ನೆ ಎದುರಾಗುತ್ತಿದ್ದಂತೆ ಚೈತ್ರ ಕುಂದಾಪುರ ಅವರು ‘ಈ ಪ್ರಕರಣ ಕೋರ್ಟ್‌ನಲ್ಲಿದೆ. ಆರೋಪ ಸುಳ್ಳು ಎಂದು ಸಾಬೀತು ಮಾಡಿಕೊಳ್ಳಲು ನ್ಯಾಯಾಲಯ ಖಂಡಿತವಾಗಿಯೂ ಅವಕಾಶ ಕೊಟ್ಟೇ ಕೊಡುತ್ತದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ’ ಎಂದಿದ್ದಾರೆ. ಅಲ್ಲದೆ ನನ್ನ ರೀತಿ ಸಾಮಾಜಿಕ ಜೀವನದಲ್ಲಿರುವ ಎಲ್ಲರ ಮೇಲೂ ಇಂತಹದೊಂದು ಆರೋಪ ಬಂದೇ ಬರುತ್ತದೆ. ಯಾರಾದರೂ ಬೆಳೆಯುತ್ತಾರೆ ಎಂದರೆ ತುಳಿಯುವಂತಹ ಪ್ರಯತ್ನವನ್ನು ಸಾವಿರ ಸಲ ಮಾಡಿಯೇ ಮಾಡುತ್ತಾರೆ. ನನಗೆ ನನ್ನ ಮೇಲೆ ನೂರಕ್ಕೆ ನೂರು ಗ್ಯಾರಂಟಿ ಇದೆ. ನಾನು ತಪ್ಪು ಮಾಡಿದ್ದರೆ ಮತ್ತೆ ಸಮಾಜದ ಮುಂದೆ ತಲೆ ಎತ್ತಿ ಬರುತ್ತಿರಲಿಲ್ಲ. ಯಾಕೆಂದರೆ ತಪ್ಪು ಮಾಡಿದವನಿಗೆ ಒಂದು ಅಂಜಿಕೆ ಇರುತ್ತದೆ. ನಾನು ತಪ್ಪು ಮಾಡಿಲ್ಲ ಎನ್ನುವ ಕಾರಣಕ್ಕೆ ಬಹಳ ಗಟ್ಟಿಯಾಗಿ ಅಷ್ಟೇ ಧೈರ್ಯದಿಂದ ತಲೆ ಎತ್ತಿಕೊಂಡು ಸಮಾಜದ ಮುಂದೆ ಬಂದಿದ್ದೇನೆ ಎಂದು ಹೇಳುವ ಮೂಲಕ ತಾನು ಯಾವುದೇ ವಂಚನೆ ಮಾಡಿಲ್ಲ ಎಂದು ಒತ್ತಿ ಒತ್ತಿ ಹೇಳಿದ್ದಾರೆ.
ಅಲ್ಲದೆ ‘ನನ್ನ ಮೇಲೆ ಬಂದಿರುವ ಆರೋಪ ಸುಳ್ಳು ಎನ್ನುವುದನ್ನು ನಾನು ಕಾನೂನು ಹೋರಾಟದ ಮೂಲಕವೇ ಸಾಬೀತು ಮಾಡಿಕೊಳ್ಳುತ್ತೇನೆ. ದೇಶದಲ್ಲಿ ಜನ ಸಂಖ್ಯೆ ಹೆಚ್ಚಿರುವ ಕಾರಣ ಕಾನೂನು ಪ್ರಕ್ರಿಯೆ ತಡವಾಗಿರಬಹುದು. ಆದರೆ ನನಗೆ ವಿಶ್ವಾಸವಂತೂ ಇದೆ. ನನಗೆ ಅನ್ಯಾಯ ಆಗುವುದಿಲ್ಲ. ಕಾನೂನಿನಲ್ಲಿ ಅನ್ಯಾಯ ಆಗಲ್ಲ ಎನ್ನುವ ವಿಶ್ವಾಸ ಇದೆ. ಕೋರ್ಟ್ ನೋಡಿಕೊಳ್ಳಲಿ. ‘ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ನಾನು ಸಂಪೂರ್ಣವಾಗಿ ತಲೆ ಬಾಗುತ್ತೇನೆ. ಬದುಕಿನ ಕೊನೆಯ ಕ್ಷಣದವರೆಗೂ ಅದಕ್ಕಾಗಿ ಹೋರಾಡುತ್ತೇನೆ. ನನ್ನ ಮೇಲೆ ಬಂದಿರುವ ಆರೋಪಗಳ ವಿರುದ್ಧ ಅಂದರೆ ಇದೊಂದು ಕೇಸ್ ಅಲ್ಲ, ಎಲ್ಲಾ ಕೇಸ್‌ಗಳ ವಿರುದ್ಧ ಹೋರಾಡುತ್ತೇನೆ ಎಂದು ಅಬ್ಬರಿಸಿದ್ದಾರೆ.
Comments are closed.