Mangaluru : ಉಳ್ಳಾಲ ಬ್ಯಾಂಕ್ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !! ಒಡಿಶಾ ದರೋಡೆಗೆ ಲಿಂಕ್ ?

Mangaluru: ಇತ್ತೀಚಿಗೆ ಮಂಗಳೂರಿನಲ್ಲಿ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣ ತನಿಖೆ ಹಂತದಲ್ಲಿದ್ದು ದರೋಡೆಕೋರನೊಬ್ಬನ ಫೋಟೋ ವೈರಲ್ ಆಗಿದೆ. ಅಲ್ಲದೆ ಈ ಘಟನೆಗೆ ಸ್ಥಳೀಯರೊಬ್ಬರ ಕೈವಾಡವಿದೆ ಎಂಬ ಅನುಮಾನ ಕೂಡ ವ್ಯಕ್ತವಾಗಿತ್ತು. ಈ ಬೆನ್ನೆಲ್ಲೇ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ

ಹೌದು, ಮಂಗಳೂರಿನ(Mangaluru) ಬ್ಯಾಂಕ್‌ನಿಂದ 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಹಲವು ಟ್ವಿಸ್ಟ್ ಎದುರಾಗಿದೆ. ಮಂಗಳೂರಿನಲ್ಲಿ ನಡೆದ ದರೋಡೆ ಮಾದರಿಗೂ ಒಡಿಶಾದಲ್ಲಿ ನಡೆಗ ದರೋಡೆಗೆ ಲಿಂಕ್ ಇದೆಯಾ ಅನ್ನೋ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಅಂದಹಾಗೆ ಇತ್ತೀಚಿಗೆ ಬಿಹಾರದ ಗ್ಯಾಂಗ್ ಒಂದು ಒಡಿಶಾದಲ್ಲಿ ಬರೋಬ್ಬರಿ 30 ಕೋಟಿ ದರೋಡೆಯನ್ನು ಮಾಡಲಾಗಿತ್ತು. ಈ ಬೆನ್ನಲ್ಲೇ ಮಂಗಳೂರಿನ ಬ್ಯಾಂಕಿನಲ್ಲಿಯೂ ಕೂಡ 15 ಕೋಟಿ ಕಳ್ಳತನ ವಾಗಲಿದೆ. ಒಡಿಶಾದಲ್ಲೂ ಕಳ್ಳತನ ಮಾಡಿದ ಗ್ಯಾಂಗೆ ಮಂಗಳೂರಿನಲ್ಲೂ ಕೂಡ ದರೋಡೆ ಮಾಡಲಾಗಿದೆ ಎನ್ನಲಾಗಿದೆ. .

ಕೋಟೆಕಾರ್ ಬ್ಯಾಂಕಿನಲ್ಲಿ ದರೋಡೆಯಾದ ದಿನ ಸಿಸಿ ಕ್ಯಾಮೆರಾಗಳು ಹಾಳಾಗಿದ್ದವು. ಅಲ್ಲದೆ ಅಂದು ಸಿಎಂ ಮಂಗಳೂರಿಗೆ ಭೇಟಿ ನೀಡುವ ಸಂದರ್ಭ. ಹೆಚ್ಚಿನ ಪೊಲೀಸ್ ಸಿಎಂನ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹೀಗಾಗಿ ಈ ಎಲ್ಲ ಸಂದರ್ಭಗಳನ್ನು ನೋಡಿಕೊಂಡು ಬ್ಯಾಂಕಿನಲ್ಲಿ ದರೋಡೆ ಮಾಡಲಾಗಿದೆ. ಇದೇ ರೀತಿ ಒಡಿಶಾದಲ್ಲೂ ಕೂಡ ದರೋಡೆ ನಡೆದಿದೆ. ಪ್ರಮುಖವಾಗಿ ಎರಡೂ ಪ್ರಕರಣಗಳಲ್ಲಿ ಹಲವು ಸಾಮ್ಯತೆಗಳು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಹಾರ ಗ್ಯಾಂಗ್ ಒಂದರ ಹಿಂದೆ ಬಿದ್ದಿದ್ದಾರೆ.

Comments are closed.