Siddaramaiah ಯಾರನ್ನೂ ಬಿಡಲ್ಲ, ಮಹಿಳಾ ಪತ್ರಕರ್ತರನ್ನು ಬಿಡದೆ ಮುತ್ತಿಡುತ್ತಾರೆ, ನೊಂದವರ ಲಿಸ್ಟ್ ನನ್ನಲ್ಲಿದೆ- ಕರ್ನಾಟಕ ಸಿಎಂ ವಿರುದ್ಧ ಹಿಂದೂ ವಾಗ್ಮಿ ನಾಜೀಯಾ ಖಾನ್ ಗಂಭೀರ ಆರೋಪ!!

Siddaramaiah: ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು(CM Siddaramaiah)ಮಹಿಳಾ ಪತ್ರಕರ್ತರನ್ನು ಬಿಡದೆ ಚುಮ್ಮಾ ಚಾಟಿ ಮಾಡಿದ್ದಾರೆ ಎಂದು ಹಿಂದೂತ್ವದ ಪ್ರಖರ ವಾಗ್ಮಿ ನಾಜೀಯಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೌದು, ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಮುತ್ತು ನೀಡುತ್ತಾರೆ. ಸಿದ್ದರಾಮಯ್ಯ ನಡೆಯ ಬಗ್ಗೆ ನಾನು ವಿರೋಧಿಸಿದ್ದೇನೆ. ಪಕ್ಷದ ಮಹಿಳಾ ವಕ್ತಾರೆಯರಿಗೆ ಸಿದ್ದರಾಮಯ್ಯನವರು ಮುತ್ತು ನೀಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಚಲನಚಿತ್ರ ನಟಿಯರನ್ನು ಕೂಡ ಬಿಡದೆ ಸಿಎಂ ಸಿದ್ದರಾಮಯ್ಯ ಅಪ್ಪಿಕೊಳ್ಳುತ್ತಾರೆ. ಮಹಿಳಾ ಪತ್ರಕರ್ತೆಯರ ಜೊತೆಗೂ ಸಿಎಂ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರನ್ನೂ ಬಿಡುತ್ತಿಲ್ಲ. ನೊಂದವರ ಲಿಸ್ಟ್ ನನ್ನ ಬಳಿ ಇದೆ ಅಂತ ಅವರು ಹೇಳಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆದರೆ ಇದೆಲ್ಲವೂ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ.
ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ನಿಂತು ನಿರೂಪಕಿಯೊಬ್ಬರನ್ನು ನೋಡಿದ್ದು ಈ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಗುತ್ತಲ್ಲೇ ಎಲ್ಲರ ಮುಂದೆ ಸಿದ್ದರಾಮಯ್ಯ ಅವರು ಮಾತನಾಡಿದ್ದರು. ಆದರೆ ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ಬಗ್ಗೆ ಇದೀಗ ಗಂಭೀರ ಆರೋಪಗಳು ಕೇಳಿ ಬಂದಿವೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಆಧಾರ ರಹಿತವಾಗಿ ಆರೋಪ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿದೆ.
Comments are closed.