Kiccha Sudeep : ಬಿಗ್ ಬಾಸ್ ಗೆ ಅಧಿಕೃತ ವಿದಾಯ ಹೇಳಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಕಿಚ್ಚ !!

Kiccha Sudeep: ಬಿಗ್ ಬಾಸ್ ಕನ್ನಡ ಶೋ ಅಂದ್ರೆ ಯಾರು ನೆನಪಾಗುತ್ತಾರೋ ಇಲ್ಲ ಗೊತ್ತಿಲ್ಲ. ಆದರೆ ಥಟ್ ಅಂತ ನೆನಪಾಗುವುದೇ ಕಿಚ್ಚ ಸುದೀಪ್(Kiccha Sudeep). ಕಳೆದ ಹತ್ತು ವರ್ಷದಿಂದ ಅವರು ಬಿಗ್ ಬಾಸ್ ಜರ್ನಿಯಲ್ಲಿ ಮುಂದುವರೆದಿದ್ದಾರೆ. ಇದೀಗ 11ನೇ ಸೀಸನ್ ಅನ್ನು ಕೂಡ ಅವರು ಅತ್ಯಂತ ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಮುಂದಿನ ಸೀಸನ್ ನಿಂದ ಬಿಗ್ ಬಾಸ್ ಅನ್ನು ಕಿಚ್ಚ ಸುದೀಪ್ ಹೋಸ್ಟ್ ಮಾಡುವುದಿಲ್ಲ ಎಂಬುದು.

ಹೌದು, ಕಿಚ್ಚ ಸುದೀಪ್ ಅವರು ಏಕಾಏಕಿ ‘ಬಿಗ್ ಬಾಸ್'(Bigg Boss) ನಿರೂಪಣೆಯಿಂದ ಕೆಳಕ್ಕೆ ಇಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 11 ಆರಂಭವಾದಾಗಿನಿಂದಲೂ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ ನಿಂದ ನಾನು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎಂದು ಹೇಳಿದ್ದರು. ಈ ಕುರಿತಾಗಿ ಪೋಸ್ಟ್ ಅನ್ನು ಕೂಡ ಅವರು ಮಾಡಿದ್ದರು. ಇದೀಗ 11ನೇ ಸೀಸನ್ ಮುಕ್ತಾಯದ ಹಂತದಲ್ಲಿದ್ದು, ಈ ಬೆನ್ನಲ್ಲೇ ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ಗೆ ಗುಡ್ ಬೈ ಹೇಳಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಬಿಗ್ ಬಾಸ್ ಅನ್ನು ಕಳೆದ 11 ಸೀಸನ್‌ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿದ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಅಂತಿಮ ಪಂದ್ಯವು ಆತಿಥೇಯನಾಗಿ ನನ್ನ ಕೊನೆಯದು. ಮತ್ತು ನನ್ನ ಕೈಲಾದಷ್ಟು ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸಲು ನಾನು ಪ್ರಯತ್ನಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಧನ್ಯವಾದಗಳು, @ColorsKannada, ಈ ಅವಕಾಶಕ್ಕಾಗಿ’ ಎಂದು ಬರೆದುಕೊಂಡಿದ್ದಾರೆ.

Comments are closed.