Sharon Raj Murder Case: ಲವ್ವರ್‌ಗೆ ವಿಷವುಣಿಸಿ ಕೊಂದ ಪ್ರಕರಣ; ಕೇರಳ ಕೋರ್ಟ್‌ನಿಂದ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ

Sharon Raj Murder Case: ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದಂತಹ ಕೊಲೆ ಘಟನೆಗೆ ಸಂಬಂಧಪಟ್ಟಂತೆ ನ್ಯಾಯಾಲಯವು ಆರೋಪಿಗೆ ಮರಣದಂಡನೆಯನ್ನು ವಿಧಿಸಿದೆ. ಹೌದು. ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನ ಪ್ರಿಯತಮೆಯಾಗಿದ್ದ ಗ್ರೀಷ್ಮಾಳಿಗೆ ತಿರುವನಂತರಪುರದ ನೆಯ್ಯಟ್ಟಿಂಕರ ಸೆಷನ್ಸ್ ನ್ಯಾಯಾಲಯವು ನ್ಯಾಯಾಲಯವು ಮರಣದಂಡನೆಯ ಶಿಕ್ಷೆಯನ್ನು ನೀಡಿದೆ.
ಎ1 ಆರೋಪಿ ಗ್ರೀಷ್ಮಾ ಆಗಿದ್ದು, ಈ ಪ್ರಕರಣದ ಇನ್ನೋರ್ವ ಆರೋಪಿ ಈಕೆಯ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್‌ಗೆ 3 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡವನ್ನು ಸೋಮವಾರ ಕೋರ್ಟ್ ಆದೇಶ ನೀಡಿದೆ. ಘಟನೆಯ ತೀರ್ಪು ಹೊರ ಬರುತ್ತಿದ್ದಂತೆ ಶರಣ್ ರಾಜ್ ಪೋಷಕರ ಕಣ್ಣಲ್ಲಿ ನೀರು ಬಂದಿದೆ. ಕೊನೆಗೂ ನನ್ನ ಮಗನ ಸಾವಿಗೆ ನ್ಯಾಯ ದೊರಕಿತು ಎಂದು ಪೋಷಕರು ಅಳುತ್ತಾ ಮಾಧ್ಯಮದ ಮುಂದೆ ಹೇಳಿದರು.
ಆದರೆ ಇಷ್ಟೆಲ್ಲಾ ಮಾಡಿರುವ ಆರೋಪಿ ಗ್ರೀಷ್ಮಾ ಮಾತ್ರ ಯಾವುದ ಭಾವನೆಯನ್ನು ವ್ಯಕ್ತಪಡಿಸದೇ ಸುಮ್ಮನೆ ಇದ್ದಿರುವುದು ಕಂಡು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
ಪರಸ್ಸಾಲದ ತಿರುವನಂತಪುರಂನ ಶರೋನ್ ರಾಜ್ ಅಕ್ಟೋಬರ್ 25, 2022 ರಂದು ಇಂಟರ್‌ನಲ್ ಅಂಗಗಳ ವೈಫಲ್ಯದಿಂದ ಸಾವಿಗೀಡಾಗಿದ್ದ. ಆದರೆ ಸಾವಿನ ತನಿಖೆಯಿಂದ ವಿಷಪ್ರಾಶನ ನೀಡಿರುವ ಕುರಿತು ತಿಳಿದು ಬಂದಿದೆ. ಶರೋನ್ ಜೊತೆ ಸಂಬಂಧ ಹೊಂದಿದ್ದ ಪ್ರೇಯಸಿ ಗ್ರೀಷ್ಮಾ ತಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದ್ದರಿಂದ ವಿಷ ನೀಡಿರುವ ಕುರಿತು ತನಿಖೆಯಿಂದ ತಿಳಿದು ಬಂದಿದೆ.
ಘಟನೆ ವಿವರ: ಗ್ರೀಷ್ಮಾ 2022, ಮಾರ್ಚ್4 ರಂದು ಯೋಧನೋರ್ವನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ನಂತರ ತನ್ನ ಸಂಬಂಧವನ್ನು ತನ್ನ ಪ್ರಿಯಕರ ಶರೋನ್ ಜೊತೆ ಕಡಿದುಕೊಂಡಿದ್ದಳು. ಆದರೆ ಮತ್ತೆ ಮೇ ತಿಂಗಳಲ್ಲಿ ಶರೋನ್ ಗ್ರೀಷ್ಮಾಗೆ ಹತ್ತಿರವಾಗಿದ್ದ. ಗ್ರೀಷ್ಮಾ ಅಕ್ಟೋಬರ್ 14 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರೈನಲ್ಲಿರುವ ತನ್ನ ಮನೆಗೆ ಶರೋನ್ ನನ್ನು ಬರಲು ಹೇಳಿ, ದೈಹಿಕ ಸಂಬಂಧ ಬೆಳೆಸಲು ಒತ್ತಾಯ ಮಾಡಿದ್ದಾಳೆ. ಇಬ್ಬರೂ ಬರೋಬ್ಬರು 1ಗಂಟೆ 7 ನಿಮಿಷಗಳ ಕಾಲ ಸೆಕ್ಸ್ ಮಾಡಿದ್ದಾರೆ. ಅನಂತರ ಆಕೆ ಕುಡಿಯಲು ಆಯುರ್ವೇದಿಕ್ ಜ್ಯೂಸ್ ನೀಡಿದ್ದು, ಅದರಲ್ಲಿ ವಿಷವನ್ನು ಮಿಶ್ರಣ ಮಾಡಿದ್ದಳು. ಗ್ರೀಷ್ಮಾಳ ತಂದೆ-ತಾಯಿ ಬೇರೆಯವರೊಂದಿಗೆ ಮದುವೆ ನಿಶ್ಚಯಿಸಿದ್ದರಿಂದ, ಬ್ರೇಕಪ್‌ಗೆ ಒಪ್ಪದ ತನ್ನ ಲವ್ವರ್‌ನನ್ನು ತನ್ನ ಬಾಳಿನಿಂದ ದೂರ ಮಾಡಲು ಹೀಗೆ ಮಾಡಿದ್ದಾಳೆ. ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳಿದರೂ ಆತ ಬ್ರೇಕಪ್‌ಗೆ ಒಪ್ಪಿರಲಿಲ್ಲ. ತನ್ನ ಎಲ್ಲಾ ಪ್ರಯತ್ನ ವಿಫಲವಾಗಿದ್ದನ್ನು ಕಂಡ ಗ್ರೀಷ್ಮಾ ಕೊನೆಗೆ ಆತನನ್ನು ಸಾಯಿಸಲು ಈ ಉಪಾಯ ಮಾಡಿದ್ದಾಳೆ.
ಜ್ಯೂಸ್ ಕುಡಿದು ಮನೆಗೆ ಬಂದ ಶರೋನ್ ವಾಂತಿ ಮಾಡಿಕೊಂಡಿದ್ದಾನೆ. ಗ್ರೀಷ್ಮಾಳ ಮನೆಯಿಂದ ಹೊರಬಂದ ನಂತರ ಶರೋನ್ ದೇಹದಲ್ಲಿ ವಿಷದ ಲಕ್ಷಣಗಳು ಕಂಡ ಬಂದಿದೆ. ಶರೋನ್ ಹನ್ನೊಂದು ದಿನಗಳ ಕಾಲ ಒಂದು ಹನಿ ನೀರು ಕುಡಿಯದೆ ಆಸ್ಪತ್ರೆಯಲ್ಲಿ ಒದ್ದಾಡಿದ್ದು, ಗ್ರೀಷ್ಮಾಳ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಸಾವು ಬದುಕಿನ ನಡುವೆ ಹೋರಾಡಿದ ಶರೋನ್ ಅ.25 ರಂದು ಮೃತ ಹೊಂದಿದ್ದಾನೆ. ಆದರೆ ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್‌ನಲ್ಲಿದ್ದ ಶರೋನ್ ರಾಜ್ ನನಗೆ ವಿಷ ನೀಡಿ ಮೋಸ ಮಾಡಿದ್ದಾಳೆ ಎಂದು ಸಂಬಂಧಿಕರಿಗೆ ಹೇಳಿದ್ದಾನೆ. ಇವೆಲ್ಲ ಅಂಶಗಳನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
Comments are closed.