Beer Price Hike: ಇಂದಿನಿಂದ ರಾಜ್ಯದಲ್ಲಿ ʼಬಿಯರ್‌ ದರ ಏರಿಕೆʼ; ಪರಿಷ್ಕೃತ ದರ ಇಲ್ಲಿದೆ

Beer Price Hike: ಮದ್ಯ ಪ್ರಿಯರಿಗೆ ರಾಜ್ಯ ಸರಕಾರ ಶಾಕಿಂಗ್‌ ನ್ಯೂಸ್‌ವೊಂದನ್ನು ನೀಡಿದೆ. ರಾಜ್ಯದಲ್ಲಿ ಬಿಯರ್‌ ದರ ಏರಿಕೆಯಾಗಿದೆ. ಪರಿಷ್ಕೃತ ದರ ಜಾರಿಗೆ ಇಂದಿನಿಂದ ಆಗಲಿದೆ. ರಾಜ್ಯ ಸರಕಾರ ಜ.20 ರಿಂದ ಪರಿಷ್ಕೃತ ದರವನ್ನು ಜಾರಿಗೊಳಿಸಿದೆ. ಸುಂಕ ಪ್ರಮಾಣ ಏರಿಕೆಯ ಆಧಾರದಲ್ಲಿ ಕೆಲವು ಪ್ರೀಮಿಯಂ ಬಿಯರ್‌ಗಳ ಚಿಲ್ಲರೆ ಮಾರಾಟದಲ್ಲಿ 10 ರಿಂದ 50 ರೂ.ವರೆಗೆ ಏರಿಕೆ ಮಡಲಾಗಿದೆ.

130ರೂ. ಇದ್ದ ಪವರ್‌ ಕೂಲ್‌ ಬಿಯರ್‌ ಬೆಲೆಯು ಇದೀಗ ರೂ.155 ಆಗಿದೆ. ರೂ.145 ಇದ್ದ ಬ್ಲಾಕ್‌ ಪೋರ್ಟ್‌ ಬಿಯರ್‌ ದರ ರೂ.160 ಆಗಿದೆ. ರೂ.100 ಇದ್ದ ಲೆಜೆಂಡ್‌ ಬಿಯರ್‌ ದರ ರೂ.145 ರೂಪಾಯಿ ಆಗಿದೆ. ರೂ.240 ಇದ್ದ ವುಡ್‌ ಪೀಆಕೆರ್‌ ಕ್ರೆಸ್ಟ್‌ ರೂ.250 ಆಗಿದೆ. ಹಂಟರ್‌ ಬಿಯರ್‌ ದರ ರೂ.180 ಈ ಹಿಂದೆ ಇತ್ತು, ಇದೀಗ ರೂ.190 ಆಗಿದೆ. ವುಡ್‌ ಪೆಕರ್‌ ಗ್ಲೈಡ್‌ ಬಿಯರ್‌ ಈ ಹಿಂದೆ ರೂ.230 ಇದ್ದು, ಇದೀಗ ರೂ.240 ಆಗಿದೆ.

Comments are closed.