Mahakumba: ಅಯ್ಯೋ.. ಕುಂಭಮೇಳದ ಈ ಸುಂದರಿಗೆ ಸೌಂದರ್ಯವೇ ಮುಳುವಾಯ್ತು…! ಏನಾಗಬಾರದಿತ್ತೋ ಅದೇ ನಡೆದೋಯ್ತು !!

Mahakumba: ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭ(Mahakumha) ಮೇಳಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಬಂದು ಸೇರುತ್ತಿದ್ದಾರೆ. ಸಾಧುಗಳು ಸಂತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನು ಕುಂಭಮೇಳಕ್ಕೆ ಬಂದಿರುವ ಸಾವಿರಾರು ನಾಗಸಾಧುಗಳು ಅವರ ವೇಷಭೂಷಣಗಳು, ಆಚರಣೆಗಳು ಸೇರಿದಂತೆ ಸಾಕಷ್ಟು ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇವರಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಲಕ್ಷ ಲಕ್ಷ ಸಂಬಳ ಬಿಟ್ಟು ಸನ್ಯಾಸ ಸ್ವೀಕರಿಸಿರುವವರು ಒಂದು ಕಡೆಯಾದರೆ ಯಾವ ನಟಿಯರಿಗೂ ಕಡಿಮೆ ಇಲ್ಲ ಎಂಬಂತಹ ಅಂದ ಇರುವ ಸಾಕಷ್ಟು ಯುವತಿಯರು ಸಾಧ್ವಿಗಳಾಗಿದ್ದಾರೆ. ಈ ಎಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿದ್ದು ಮಾತ್ರ ಮೊನಾಲಿಸಾ.!!
ಹೌದು, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿಯೊಬ್ಬಳು ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನ ಮೊನಾಲಿಸಾ ಎಂಬ ಹೆಸರಿನ ಈ ಹುಡುಗಿ ನಿಜಕ್ಕೂ ಹೆಸರಿಗೆ ತಕ್ಕಂತೆ ಭೂಲೋಕ ಸುಂದರಿ ಎಂದೇ ಹೇಳಬಹುದು, ಮಹಾಕುಂಭ ಮೇಳದಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಈ ಕಂದು ಬಣ್ಣದ ಸುಂದರಿ ಇದೀಗ ದೇಶದ ಕ್ರಷ್ ಆಗಿದ್ದಾಳೆ. ಆದರೆ ಇದೀಗ ಆಕೆಯ ಸೌಂದರ್ಯವೇ ಅವಳಿಗೆ ಮುಳುವಾಗಿದೆ.
ಯಸ್ .. ಪ್ರಸ್ತು ಕುಂಭಮೇಳ ದೇಶದಾದ್ಯಂತ ಸುದ್ದಿಯಲ್ಲಿರುವ ವಿಷಯ. ಈಗಾಗಲೇ ಐಐಟಿ ಬಾಬಾ, ಗ್ಲಾಮರಸ್ ಸಾಧ್ವಿ ಹರ್ಷರಿಚಾರ್ಯ ಒಂದು ರೇಂಜ್ ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇವರ ನಡುವೆ.. ವೈರಲ್ ಆದ ರುದ್ರಾಕ್ಷಿ ಮಾರುವ ಯುವತಿಯನ್ನು ಸಂದರ್ಶಿಸಲು ಹಲವು ಮಾಧ್ಯಮಗಳು ಪೈಪೋಟಿ ನಡೆಸುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಈಕೆಯ ಸೌಂದರ್ಯ ವಿಚಾರವೇ ಸುದ್ದಿಯಾಗುತ್ತಿದೆ.
ಈಕೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಂತೆ ಮಾದ್ಯಮದವರು, ಯೂಟ್ಯೂಬರ್ಸ್ ಗಳು ಡಿಜಿಟಲ್ ಕ್ರಿಯೇಟರ್ಸ್, ಸೇರಿದಂತೆ ಎಲ್ಲರೂ ಸಂದರ್ಶನಕ್ಕಾಗಿ ಆಕೆಯ ಹಿಂದೆ ಬಿದ್ದಿದ್ದು, ಸದ್ಯ ರುದ್ರಾಕ್ಷಿ ಮಾರಾಟ ಮಾಡೋದು ಬಿಡಿ, ಮನೆಯಿಂದ ಕೂಡ ಆಚೆ ಬರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ನೆಟ್ಟಿಗರು ಕೂಡ ಫೋಟೋ, ವಿಡಿಯೋ ಎಂದು ಹಿಂದೆ ಹಿಂದೆ ಬರುತ್ತಿದ್ದ ಕಾರಣ ವ್ಯಾಪಾರದಲ್ಲಿ ಕುಸಿತದಿಂದ ಬೇಸತ್ತ ಮೊನಾಲಿಸಾಳ ತಂದೆ ಆಕೆಯ ಹಿತದೃಷ್ಟಿಯಿಂದ ವಾಪಸ್ ಮನೆಗೆ ಕಳುಹಿಸಿದ್ದಾರೆ ಎಂದು ಆಕೆಯ ತಂಗಿ ತಿಳಿಸಿದ್ದಾಳೆ.
Comments are closed.