Viral Video : ಹನುಮಾನ್ ಚಾಲೀಸಾ ಹೇಳುತ್ತಿದ್ದಂತೆ ಹೊಟ್ಟೆಯೊಳಗಿಂದಲೇ ಪ್ರತಿಕ್ರಿಯಿಸಿದ ಮಗು !! ಅಚ್ಚರಿ ವಿಡಿಯೋ ವೈರಲ್

Viral Video : ಮಹಿಳೆಯರು ಗರ್ಭವತಿ ಆದ ಸಂದರ್ಭದಲ್ಲಿ ಉತ್ತಮ ಆಹಾರ ಸೇವನೆಯೊಂದಿಗೆ ಒಳ್ಳೆಯ ಅಭ್ಯಾಸಗಳನ್ನು ಕೂಡ ಬೆಳೆಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ. ಹೊರಗಡೆ ನಾವು ಏನು ಮಾಡುತ್ತೇವೆ, ಏನನ್ನು ನಡೆಸುತ್ತೇವೆ, ಏನನ್ನು ಮಾತನಾಡುತ್ತೇವೆ ಎಂಬುದು ಗರ್ಭದಲ್ಲಿರುವ ಕುಡಿಗಳಿಗೆ ತಿಳಿಯುತ್ತದೆ ಎಂಬುದು ಅವರ ನಂಬಿಕೆ. ಇದಕ್ಕೆ ಮಹಾಭಾರತ ಕಾಲದಿಂದಲೂ ನಾವು ನಿದರ್ಶನಗಳನ್ನು ನೋಡಬಹುದು. ಅಂತೆಯೇ ಇಂದು ಗರ್ಭವತಿಯಾದ ಮಹಿಳೆಯರು ಪುಸ್ತಕ ಓದುವುದು, ಹಾಡು ಕೇಳುವುದು, ಸಂಗೀತ ಅಭ್ಯಾಸ ಮಾಡುವುದು ಹೀಗೆ ಒಳ್ಳೊಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಳ್ಳುತ್ತಿದ್ದಾರೆ.

 

View this post on Instagram

 

A post shared by SunRaah (@sunraah)

ಇನ್ನು ವಿಶೇಷವೆಂದರೆ ತಾಯಿಯ ಗರ್ಭದಲ್ಲಿರುವ ಮಕ್ಕಳು ಸಂಗೀತವನ್ನು ಆಲಿಸುತ್ತವೆ, ಅದಕ್ಕೆ ಪ್ರತಿಕ್ರಿಸುತ್ತವೆ ಎಂದು ವೈದ್ಯರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಇದೀಗ ವಿಡಿಯೋ ಒಂದು ವೈರಲ್ಲಾಗಿದೆ. ಅದೇನೆಂದರೆ ತಾಯಿ ಒಬ್ಬರು ಹನುಮಾನ್ ಚಾಲೀಸಾ ಹೇಳುವಾಗ ಗರ್ಭದಲ್ಲಿರುವ ಮಗು ಅದಕ್ಕೆ ಪ್ರತಿಕ್ರಿಯೆ ನೀಡಿದೆ.

ಹೌದು, ಗರ್ಭಿಣಿಯು ಮೊದಲು ಮೊಬೈಲ್​ನಲ್ಲಿ ಸಿನಿಮಾ ಹಾಡನ್ನು ಪ್ಲೇ ಮಾಡಿ ಹೊಟ್ಟೆಯ ಮುಂದೆ ಹಿಡಿಯುತ್ತಾರೆ. ಈ ವೇಳೆ ಮಗು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಳಿಕ ಹನುಮನ್​ ಚಾಲೀಸಾವನ್ನು ಪ್ಲೇ ಮಾಡಿ ಹೊಟ್ಟೆಯ ಮುಂದೆ ಹಿಡಿದಾಗ ಮಗು ಒಳಗೆ ಚಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅಂದಹಾಗೆ ಈ ವಿಡಿಯೋವನ್ನು @SunRaah ಎಂಬ ಇನ್​ಸ್ಟಾಗ್ರಾಂ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Comments are closed.