Ashok Kumar Rai: ಉಳ್ಳಾಲ ಬ್ಯಾಂಕ್ ದರೋಡೆ ಪ್ರಕರಣ – ಪೊಲೀಸರ ಮೇಲೆ ಆರೋಪ ಹೊರಿಸಿದ ಶಾಸಕ ಅಶೋಕ್ ಕುಮಾರ್ ರೈ !!

Ashok Kumar Rai: ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಈ ನಡುವೆ ದರೋಡೆಕೋರನೊಬ್ಬನ ಫೋಟೋ ವೈರಲ್ ಆಗಿದೆ. ಈ ಬೆನ್ನಲ್ಲೇ ಪುತ್ತೂರು ಕಾಂಗ್ರೆಸ್ ಶಾಸಕ ಅಚ್ಚರಿ ಹೇಳಿಕೆ ನೀಡಿದ್ದು ಈ ಬ್ಯಾಂಕ್ ದರೋಡೆ ಆರೋಪವನ್ನು ಪೊಲೀಸರ ಮೇಲೆ ಹೊರಿಸಿದ್ದಾರೆ.

 

ಇತ್ತೀಚಿಗೆ ರಾಜ್ಯದಲ್ಲಿ ಬ್ಯಾಂಕ್, ಎಟಿಎಂ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಅಂತೆಯೇ ಬೀದರ್‌​ನಲ್ಲಿ ಎಟಿಎಂಗೆ (ATM) ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ (Money) ದರೋಡೆ (Robbery) ಮಾಡಿದ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಪುತ್ತೂರು ಶಾಸಕ ಅಶೋಕ್ ರೈ ಅವರು ಪ್ರತಿಕ್ರಿಯಿಸಿದ್ದು ಇದಕ್ಕೆ ಭದ್ರತಾ ಲೋಪವೇ ಕಾರಣ ಎಂದು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

 

ಹೌದು, ಮಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ, ಜಿಲ್ಲೆಯಲ್ಲಿ ಕಾನೂನು‌ ಸುವ್ಯವಸ್ಥೆ ವಿಫಲವಾಗಿರುವ ಆರೋಪವನ್ನು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಒಪ್ಪಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಹಾಡುಹಗಲೇ ದುಡ್ಡು ದೋಚಿಕೊಂಡು ಹೋಗುತ್ತಾರೆಂದರೆ ಪೋಲೀಸ್ ವ್ಯವಸ್ಥೆ ಇಲ್ಲವೇ ಎನ್ನುವ ಸಂಶಯ ಮೂಡುತ್ತದೆ. ಪೋಲೀಸರು ಕೆಲಸ ಮಾಡುತ್ತಿದ್ದಾರಾ ಅಥವಾ ಪೋಲೀಸರ ಹೆದರಿಕೆ ಅಪರಾಧಿಗಳಿಗೆ ಇಲ್ವಾ ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತಿದೆ. ನನ್ನ ಪ್ರಕಾರ ಪೋಲೀಸರ ಹೆದರಿಕೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಸ್ವಲ್ಪನೂ ಇಲ್ಲ. ಇಂದು ಬ್ಯಾಂಕ್ ದೋಚುತ್ತಾರೆ, ಮುಂದಿನ ದಿನಗಳಲ್ಲಿ ಮನೆಗೆ ನುಗ್ಗಿ ದೋಚುವ ಸ್ಥಿತಿ ಬರಬಹುದು. ಕಳ್ಳರಿಗೆ, ದರೋಡೆಕೋರರಿಗೆ ಶಿಕ್ಷೆಯ ಭಯವಿಲ್ಲ. ಆದ್ದರಿಂದ ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ.

Comments are closed.