Mahakumbh: ಕುಂಭಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷವಾದ ರಾಯಚೂರು ಜಿಲ್ಲಾಧಿಕಾರಿ !!

Mahakumba: ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭ(Mahakumha) ಮೇಳಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಬಂದು ಸೇರುತ್ತಿದ್ದಾರೆ. ಸಾಧುಗಳು ಸಂತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನು ಕುಂಭಮೇಳಕ್ಕೆ ಬಂದಿರುವ ಸಾವಿರಾರು ನಾಗಸಾಧುಗಳು ಅವರ ವೇಷಭೂಷಣಗಳು, ಆಚರಣೆಗಳು ಸೇರಿದಂತೆ ಸಾಕಷ್ಟು ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಈಗ ಅದೇ ರೀತಿ ಇದೀಗ ಒಬ್ಬ ಸನ್ಯಾಸಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸನ್ಯಾಸಿಯ ವಿಶೇಷತೆ ಏನಂದರೆ ಇವರು ಹಿಂದೆ ರಾಯಚೂರು ಜಿಲ್ಲೆಯ ಡಿಸಿ ಆಗಿದ್ದರು ಎಂಬುದು!!
ಹೌದು, ಈ ಹಿಂದೆ ರಾಯಚೂರು (Raichuru) ಜಿಲ್ಲಾಧಿಕಾರಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಮಹಾ ಕುಂಭಮೇಳದಲ್ಲಿ (Mahakumbha Mela) ಸನ್ಯಾಸಿಯಾಗಿ ಪ್ರತ್ಯಕ್ಷವಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಫೋಟೋ ಈಗ ಫುಲ್ ವೈರಲ್ ಆಗಿದೆ. ಗಂಟು ಕಟ್ಟಿದ ಕೂದಲು ಇರುವ ಫೋಟೋ ವೈರಲ್ ಆಗಿದ್ದು, ಐಎಎಸ್ ಅಧಿಕಾರಿಯ ವೈರಾಗ್ಯ ಜೀವನ ಅಚ್ಚರಿ ಮೂಡಿಸಿದೆ.
ಅಂದಹಾಗೆ 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯದ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ 2012ರಲ್ಲಿ ಅವರು ನಿವೃತ್ತರಾಗಿದ್ದರು. ಬಳಿಕ 2014 ರಲ್ಲಿ ತಮಿಳುನಾಡಿನ (Tamilnadu) ಮದುರೈ ಜಿಲ್ಲೆಯ ಇರಂಜುಮುಡಿ ಶಿವನ ದೇವಾಲಯ ಬಳಿ ಮಠ ಕಟ್ಟಿಕೊಂಡಿದ್ದರು. ಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿಯಾಗಿದ್ದ ನಿವೃತ್ತ ಅಧಿಕಾರಿ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋ ಈಗ ವೈರಲ್ ಆಗಿದೆ.
Comments are closed.