Mangaluru : ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆಗೆ ಪ್ರಕರಣ – ದರೋಡೆಗೆ ಈ ಸ್ಥಳೀಯ ವ್ಯಕ್ತಿಯೇ ಮಾಸ್ಟರ್ ಮೈಂಡ್?

Mangaluru : ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಪ್ರಕರಣ ತನಿಖೆ ಹಂತದಲ್ಲಿದ್ದು ದರೋಡೆಕೋರನೊಬ್ಬನ ಫೋಟೋ ವೈರಲ್ ಆಗಿದೆ. ಈ ಬೆನ್ನಲ್ಲೇ ಈ ದರೋಡೆಗೆ ಸ್ಥಳೀಯ ವ್ಯಕ್ತಿಯೊಬ್ಬರು ಸಹಕಾರ ನೀಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಎಂದು ಹೊರ ಬಿದ್ದಿದೆ.
ಹೌದು, ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಕೋಟೆಕಾರು ಬ್ಯಾಂಕ್ ಕೆ ಸಿ ರೋಡ್ ಶಾಖೆಗೆ ನೀಲಿ ಫಿಯಟ್ ಕಾರಿನಲ್ಲಿ ಆಗಮಿಸಿದ ಐವರು ಖದೀಮರ ತಂಡ ಭಾರೀ ದರೋಡೆ ನಡೆಸಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರು ಬಂದೂಕು ತೋರಿಸಿ ಹಣ ದೋಚಿದ್ದು, ಈ ವೇಳೆ 12 ಕೋಟಿಗೂ ಅಧಿಕ ಹಣ ದರೋಡೆ ಮಾಡಿದ್ದಾರೆ. ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿ ದರೋಡೆ ಮಾಡಲಾಗಿದೆ ಎನ್ನಲಾಗಿದ್ದು, ಪಕ್ಕಾ ಪ್ಲ್ಯಾನ್ ಮಾಡಿ ದರೋಡೆಕೋರರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲಿ ಬೆಚ್ಚಿ ಬೀಳಿಸುವ ಮತ್ತೊಂದು ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದ್ದು ಈ ರೀತಿ ಭೀಕರ ದರೋಡೆಗೆ ಸ್ಥಳೀಯ ವ್ಯಕ್ತಿ ದೊಡ್ಡ ಸಹಕಾರ ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ.
ಅಂದಹಾಗೆ ಕೋಟೆಕಾರ್ ಸಹಕಾರಿ ಬ್ಯಾಂಕ್ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸ್ಥಳೀಯ ವ್ಯಕ್ತಿಯಿಂದಲೇ ಈ ದರೋಡೆಗೆ ಪ್ಲಾನ್ ಆಗಿದೆ & ಈತನೇ ಮಾಸ್ಟರ್ ಮೈಂಡ್ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಸಿಸಿ ಕ್ಯಾಮೆರಾ ಡಿವಿಆರ್ ಬದಲಾಯಿಸುವ ದಿನ & ಚಿನ್ನ ಪರಿವೀಕ್ಷಕ ಬ್ಯಾಂಕ್ ಲಾಕರ್ ಓಪನ್ ಮಾಡುವ ಸಮಯದಲ್ಲೇ ದರೋಡೆ ಆಗಿರುವುದು ಇದೀಗ ಹಲವಾರು ಅನುಮಾನ ಮೂಡಿಸಿದೆ.
Comments are closed.